×
Ad

ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರು..!!

Update: 2016-08-27 23:47 IST

ಈ ವರ್ಷದ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳಿಗೆ ಪೋಸ್ ನೀಡುತ್ತಿರುವುದು. ಪ್ರಶಸ್ತಿ ವಿಜೇತರು: (ಎಡದಿಂದ ಬಲಕ್ಕೆ) ಭಾರತದ ಮಾನವಹಕ್ಕುಗಳ ಕಾರ್ಯಕರ್ತ ಬೇಝ್‌ವಾಡ ವಿಲ್ಸನ್, ಭಾರತದವರೇ ಆದ ಕರ್ನಾಟಕ ಸಂಗೀತ ಹಾಡುಗಾರ ತೋಡೂರು ಮದಬುಸಿ ಕೃಷ್ಣ, ಜಪಾನ್ ಓವರ್‌ಸೀಸ್ ಕೋಪರೇಶನ್ ಸ್ವಯಂಸೇವಕರಾದ ರಿನ ಟನಕ, ಕೆನಿಚಿ ಕುಬೊಟ ಮತ್ತು ಕೆಂರೊ ಇವಕಮಿ. ಉತ್ತಮ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗುವ ದೇಣಿಗೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಫಿಲಿಪ್ಪೀನ್ಸ್‌ನ ಅಧ್ಯಕ್ಷ ರಾಮೊನ್ ಮ್ಯಾಗ್ಸೇಸೆ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor