ನಾನು ಹಿಂದಿನಿಂದಲೂ ಕ್ರಾಂತಿ ಮಾಡಿದವನಲ್ಲ

Update: 2016-08-28 18:20 GMT

ನಾನು ಹಿಂದಿನಿಂದಲೂ ಕ್ರಾಂತಿ ಮಾಡಿದವನಲ್ಲ

-ಡಾ.ಚಂದ್ರಶೇಖರ ಕಂಬಾರ, ಸಾಹಿತಿ

ಅಪರೂಪಕ್ಕೊಮ್ಮೊಮ್ಮೆ ನೀವು ಮಾಡುವ ವಾಂತಿಯೇ ಜನಪರ ಹೋರಾಟಗಳ ದೊಡ್ಡ ಸಮಸ್ಯೆ.

---------------------

ಯಡಿಯೂರಪ್ಪನವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ

-ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಮತದಾರರು ಅವಕಾಶ ನೀಡಿದರೂ, ರಾಜ್ಯ ಬಿಜೆಪಿಯ ಉಳಿದ ನಾಯಕರು ಅವಕಾಶ ನೀಡಬೇಕಲ್ಲ?

---------------------

ಕೇಂದ್ರ ಸರಕಾರಕ್ಕೆ ಸಂದೇಶಗಳನ್ನು ತಲುಪಿಸುವ ವ್ಯಕ್ತಿ ನಾನಲ್ಲ

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಬಹುಶಃ ಆದೇಶಗಳನ್ನು ತಲುಪಿಸುವ ವ್ಯಕ್ತಿಯಾಗಿರಬಹುದೇ?

---------------------

ಕರ್ನಾಟಕದಲ್ಲಿ ಎಲ್ಲವೂ ಇದೆ, ಆದರೆ ಪ್ರಾಮಾಣಿಕತೆಯ ಕೊರತೆ ಇದೆ

-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ

ರಾಜ್ಯ ಬಿಜೆಪಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಿ.

---------------------

ಮಂಗಳೂರಿನಿಂದ ದೇಶಪ್ರೇಮದ ಸಂದೇಶ ಹೊರಹೊಮ್ಮಬೇಕು

-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ

ಪ್ರವೀಣ್ ಪೂಜಾರಿಯ ಕೊಲೆಯೂ ಮಂಗಳೂರಿನಲ್ಲಿ ದೇಶಪ್ರೇಮದ ಭಾಗವೇ ಆಗಿದೆ.

---------------------

ಆಧ್ಯಾತ್ಮಿಕ ಸಂಪತ್ತು ವಿದ್ಯೆ ಹಾಗೂ ಭೌತಿಕ ಸಂಪತ್ತು ಹಣ ಎರಡೂ ಕೇಂದ್ರೀಕೃತವಾಗಬಾರದು

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಮಠಗಳಲ್ಲಿರುವ ತಿಜೋರಿಯನ್ನು ಒಡೆದುಬಿಟ್ಟರೆ ಆಯಿತು.

---------------------

ಆಮ್ನೆಸ್ಟಿಗೆ ದೇಶದ್ರೋಹದ ಇತಿಹಾಸವಿಲ್ಲ

-ಡಾ. ಜಿ.ಪರಮೇಶ್ವರ್, ಗೃಹಸಚಿವ

ಇತಿಹಾಸ ಇದ್ದವರ ಕುರಿತಂತೆ ತೆಗೆದುಕೊಂಡ ಕ್ರಮಗಳನ್ನು ತಿಳಿಸಿ.

---------------------

ಈಗಿರುವ ದೇಶದ್ರೋಹದ ಕಾನೂನು ಬ್ರಿಟಿಷರ ಕಾಲದ್ದು

-ವೀರಪ್ಪ ಮೊಯ್ಲಿ, ಸಂಸದ

ಓಲ್ಡ್ ಈಸ್ ಗೋಲ್ಡ್ ಎಂದು ಇಟ್ಟುಕೊಂಡಿರಬೇಕು.

 ---------------------

ಭಾರತವನ್ನು ವಿಭಜಿಸುವ ಉದ್ದೇಶದಿಂದ ಪಾಕಿಸ್ತಾನ ಹುಟ್ಟಿಕೊಂಡಿದೆ

-ಅರುಣ್ ಜೇಟ್ಲಿ, ಕೇಂದ್ರ ಸಚಿವ

ಅದು ಸಾಕಾಗುವುದಿಲ್ಲವೆಂದು ಜನರ ನಡುವೆ ಇನ್ನಷ್ಟು ವಿಭಜನೆಗಳನ್ನು ಮಾಡುತ್ತಿದ್ದೀರಾ?

---------------------

ದಲಿತರು ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿ ಸಿಡಿದೇಳುವುದು ಸಹಜ ಪ್ರಕ್ರಿಯೆ

-ಎಲ್.ಕೆ ಅಡ್ವಾಣಿ, ಬಿಜೆಪಿ ನಾಯಕ

ತಾವು ಸಿಡಿದೆದ್ದದ್ದು ಮಾತ್ರ ಅಸಹಜ ಪ್ರಕ್ರಿಯೆ ಎನ್ನುತ್ತಾರೆ ಮೋದಿ.

---------------------

ಬಿಜೆಪಿ, ಎಬಿವಿಪಿ ಡೋಂಗಿ ದೇಶಭಕ್ತರ ಸಂಘಟನೆಗಳು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಕಾಂಗ್ರೆಸ್‌ನೊಳಗಿರುವ ಸೋನಿಯಾರ ಡೋಂಗಿ ಭಕ್ತರ ಬಗ್ಗೆ ನಿಮ್ಮ ಅಭಿಪ್ರಾಯ?

---------------------

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಕಾಣುತ್ತಿದೆ

-ವಿ.ಎಸ್ ಉಗ್ರಪ್ಪ, ಎಂಎಲ್ಸಿ

ಕಾಂಗ್ರೆಸ್‌ನಲ್ಲಿ ನಾಯಕರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪಗಳಿವೆ.

---------------------

ದೇಶವಿರೋಧಿ ಹೇಳಿಕೆ ಕೊಳೆತ ಹಣ್ಣುಗಳಿದ್ದಂತೆ

-ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಕೊಳೆತ ಮನಸ್ಸುಗಳು ಉದುರುವ ಕೊಳೆತ ಹಣ್ಣು ಗಳಿಗಾಗಿ ಕಾಯುತ್ತಿರುತ್ತವೆ.

 ---------------------

ಪತ್ನಿಗೆ ಹೆರಿಗೆಯಾದಾಗ ಪತಿಗೆ ಹೆರಿಗೆ ರಜೆ ಕೊಡುವುದರಲ್ಲಿ ಅರ್ಥವಿಲ್ಲ

-ಮೇನಕಾ ಗಾಂಧಿ, ಕೇಂದ್ರ ಸಚಿವೆ

ಸದ್ಯಕ್ಕೆ ನಿಮ್ಮ ಬಾಯಿಗೆ ಅಗತ್ಯವಾಗಿ ರಜೆ ಕೊಡಬೇಕಾದುದು ಅನಿವಾರ್ಯವಾಗಿದೆ.

---------------------

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಜಯಗಳಿಸುವುದು ಗ್ಯಾರಂಟಿ

-ಶೋಭಾ ಕರಂದ್ಲಾಜೆ, ಸಂಸದೆ

ಆದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಅನುಮಾನ.

---------------------

ದೇಶ ಈಗ ಹೊರಗಿನ ಶಕ್ತಿಗಳಿಗಿಂತ, ಒಳಗಿನವರಿಂದಲೇ ಬೆದರಿಕೆ ಎದುರಿಸುವಂತಾಗಿದೆ

-ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ

ಅದಕ್ಕಾಗಿಯೇ ಮೋದಿಯವರು ದೇಶದ ಹೊರಗೆ ತಿರುಗಾಡುತ್ತಿರುವುದು.

---------------------

ಧರ್ಮ ಮತ್ತು ರಾಜಕಾರಣ ಜೋಡೆತ್ತಿನ ಬಂಡಿಯಂತೆ

-ರಮೇಶ್ ಜಿಗಜಣಗಿ, ಸಚಿವ

ಒಟ್ಟಿನಲ್ಲಿ ಎತ್ತಿನ ಬಂಡಿಯೆಂದು ವ್ಯಾಖ್ಯಾನಿಸುತ್ತಿದ್ದೀರಾ?

---------------------

ನಮ್ಮ ದೇಶದಲ್ಲಿ ಗೋವಿಗಾಗಿ ಪ್ರಾಣ ಕೊಟ್ಟವರಿದ್ದಾರೆ

-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹೆಣ್ಣಿಗಾಗಿ ತಮ್ಮ ಮಾನ ಕೊಟ್ಟವರೂ ಇದ್ದಾರೆ.

---------------------

ಕಾಲ ಕೂಡಿ ಬಂದಾಗ ತೃತೀಯ ರಂಗ ರಚನೆ

-ದೇವೇಗೌಡ, ಮಾಜಿ ಪ್ರಧಾನಿ

ತಮ್ಮ ಮಕ್ಕಳು ಪ್ರಧಾನಮಂತ್ರಿಯಾಗುವ ಕಾಲ ಕೂಡಿಬಂದಾಗಲೇ ?

---------------------

ಕುಡ್ಲ ನಿಜಕ್ಕೂ ಸ್ವರ್ಗ

-ರಮ್ಯಾ, ಮಾಜಿ ಸಂಸದೆ

ಆದರೆ ಅದನ್ನು ನರಕ ಮಾಡಲು ದುಷ್ಟ ಶಕ್ತಿಗಳು ಹೊಂಚಿ ಕೂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...