ಕೆಸರುಗದ್ದೆ ಕ್ರೀಡಾಕೂಟ ಬಹುಮಾನ ವಿತರಣೆ
ಅಂಕೋಲಾ, ಆ.30: ಕೆಸರುಗದ್ದೆ ಕ್ರೀಡಾಕೂಟ ಏರ್ಪಡಿಸಿ ಗ್ರಾಮೀಣ ಕ್ರೀಡೆಯನ್ನು ಜೀವಂತ ವಿರಿಸುವಲ್ಲಿ ರೋಟರಿ ಪ್ರಯತ್ನ ಮೆಚ್ಚುವಂತದ್ದು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವ್ಕರ್ ಅವರು ಹೇಳಿದರು. ರೋಟರಿ ಕ್ಲಬ್ ಅಂಕೋಲಾ ರೂರಲ್ ಮತ್ತು ಬೊಳೆ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಂಡ ಕೆಸರುಗದ್ದೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅತಿಥಿಗಳಾಗಿ ಮಾತನಾಡಿದರು. ಜಿ.ಪಂ. ಸದಸ್ಯ ಜಗದೀಶ ನಾಯಕ ಮೊಗಟಾ, ನಿರ್ಮಿತಿ ಸಂಸ್ಥೆಯ ರಾಜು ಟಿ. ನಾಯಕ, ರೋಟರಿ ಅಧ್ಯಕ್ಷ ಶ್ರೀಧರ ನಾಯಕ, ಕಾರ್ಯದರ್ಶಿ ಮೋಹನದಾಸ ಪೈ, ಖಜಾಂಚಿ ರಾಮದಾಸ ನಾಯಕ ಮತ್ತಿತರರು ಉಪಸ್ಥಿತರಿದ್ದರು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹೊನ್ನಳ್ಳಿ ತಂಡ ಗೆಲುವು ಸಾಧಿಸಿ ಬೊಳೆ ತಂಡ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಅವರ್ಸಾ ತಂಡ ಪ್ರಥಮ ಸ್ಥಾನ, ಅಗಸೂರು ತಂಡ ದ್ವಿತೀಯ ಸ್ಥಾನ ಪಡೆಯಿತು. ಈ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಸಹಕರಿಸಿದ ಬೊಳೆ ಗ್ರಾಮದ ಸುರೇಶ ನಾಯಕ ರನ್ನು ರೋಟರಿ ಪರವಾಗಿ ಗೌರವಿಸಲಾಯಿತು.