×
Ad

ಕಾರವಾರ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

Update: 2016-08-30 22:27 IST

ಕಾರವಾರ, ಆ.30: ವರದಕ್ಷಿಣೆ ಕಿರುಕುಳದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬಳು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಈ ಸಂಬಂಧ ತಾಲೂಕಿನ ಕಡವಾಡದ ಗ್ರಾಮಸ್ಥರು, ಮಹಿಳೆಗೆ ಕಿರುಕುಳ ನೀಡಿರುವ ಗಂಡನ ಮನೆಯವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದರು. ಸುಷ್ಮಾ ಗೋವೇಕರ್ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟ ಮಹಿಳೆ. ಈಕೆ ಗರ್ಭಿಣಿಯಾಗಿದ್ದು, ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಆತ್ಮಹತ್ಯೆ ಯತ್ನದಿಂದ ತೀವ್ರ ಅಸ್ವಸ್ಥರಾಗಿದ್ದ ಸುಷ್ಮಾ ಅವರನ್ನು ಗೋವಾದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದರು. ಗಂಡನ ಮನೆಯವರು ಸುಷ್ಮಾಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಅನೇಕ ಬಾರಿ ಕಿರುಕುಳ ನೀಡುತ್ತಿದ್ದರಿಂದ, ಮನನೊಂದ ಸುಷ್ಮಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆಕೆ ಸಹೋದರಿ ಸುಜಾತ ಪೊಲೀಸರಿಗೆ ದೂರು ನೀಡಿದ್ದಾರೆ. ಕಡವಾಡ ಗ್ರಾಮದ ಸುಷ್ಮಾ ಅವರನ್ನು ಎರಡು ವರ್ಷದ ಹಿಂದೆ ಕೋಡಿಭಾಗದ ರಾಜನ್ ಎನ್ನುವರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಆರು ತಿಂಗಳ ಮಗು ಸಹ ಇದ್ದು, ಸದ್ಯ ಸುಷ್ಮಾ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು ಎಂದು ಬೆಳಗ್ಗೆ ನಗರಠಾಣೆ ಎದುರು ಜಮಾಯಿಸಿದ ಕಡವಾಡದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News