×
Ad

ಬೀದಿ ಬದಿ ವ್ಯಾಪಾರಸ್ಥರ ನಿಯಂತ್ರಣಕ್ಕೆ ಚಿಂತನೆ

Update: 2016-08-31 22:22 IST

 ಶಿವಮೊಗ್ಗ, ಆ. 31: ನಗರದ ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಹೆಚ್ಚುತ್ತಿ ರುವ ಬೀದಿ ಬದಿ ತಿಂಡಿಗಾಡಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧ ವಾರ ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಪ್ರಮುಖ ರಸ್ತೆಗಳಲ್ಲಿ ತಿಂಡಿಗಾಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಪಾದಚಾರಿ ಮಾರ್ಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಹೊಟೇಲ್ ವ್ಯಾಪಾರಸ್ಥರಿಗೂ ನಷ್ಟವಾಗುವಂತಾಗಿದೆ. ಎಲ್ಲೆಂದರಲ್ಲಿ ತಿಂಡಿಗಾಡಿ ಇಟ್ಟುಕೊಳ್ಳುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ತೊಂದರೆಯಾಗುವಂತಾಗಿದೆ ಎಂದು ಕೆಲ ಸದಸ್ಯರು ದೂರಿದರು. ಬೀದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕಠಿಣವಾಗುತ್ತದೆ. ವ್ಯಾಪಾರಕ್ಕೆ ಸಮಯ ನಿಗದಿ ಪಡಿಸಬೇಕು. ವ್ಯಾಪಾರ ಮಾಡುವ ಸ್ಥಳ ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಬೇಕು. ಮೇಯರ್ ಹಾಗೂ ಆಯುಕ್ತರು ಈ ಬಗ್ಗೆ ಪ್ರತ್ಯೇಕ ಸಭೆೆ ಕರೆದು ಚರ್ಚೆ ನಡೆಸಬೇಕು.

 ಶಿವಮೊಗ್ಗ ನಗರವು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗುತ್ತಿ ರುವುದರಿಂದ ಅದಕ್ಕನು ಗುಣವಾಗಿ ವ್ಯವಸ್ಥೆ ಮಾಡಿಕೊಡಬೇಕು. ಸಾಕಷ್ಟು ಕಡೆ ಖಾಲಿ ಜಾಗಗಳಿದ್ದು ಈ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು. ನಂತರ ಈ ಸಂಬಂಧ ಮಾತನಾಡಿದ ಮೇಯರ್ ಎಸ್.ಕೆ. ಮರಿಯಪ್ಪ, ಸಂಜೆ 4 ಗಂಟೆ ನಂತರ ತಿಂಡಿಗಾಡಿಗಳು ವ್ಯಾಪಾರ ನಡೆಸಬೇಕೆಂಬ ಆದೇಶವನ್ನು ಅಧಿಕಾರಿಗಳು ಹೊರಡಿ ಸುವಂತೆ ಸೂಚಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಯುಕ್ತೆ ತುಷಾರಮಣಿ ಮಾತನಾಡಿ, ನಗರ ವ್ಯಾಪ್ತಿಗಳಲ್ಲಿ ಬೀದಿ ವ್ಯಾಪಾರಸ್ಥರನ್ನು ನಿಯಂತ್ರಿಸುವ ಸಂಬಂಧ ಸರಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. ಆ ಪ್ರಕಾರ ಟೌನ್ ವೆಂಡಿಂಗ್ ಕಮಿಟಿಯನ್ನು ರಚಿಸ ಬೇಕಾಗುತ್ತದೆ ಎಂದು ತಿಳಿಸಿದರು. ಸಮಿತಿ ರಚನೆ: ಈ ಸಮಿತಿ ಯಲ್ಲಿ ಪಾಲಿಕೆಯ ಸದಸ್ಯರು, ಜನಪ್ರತಿನಿ ಧಿಗಳು ಮತ್ತು ಅಧಿಕಾರಿಗಳು ಇರುತ್ತಾರೆ. ಈ ಸಮಿತಿಯನ್ನು ರಚಿಸುವ ಪ್ರಕ್ರಿಯೆ ಆರಂಭವಾಗಿದೆ. ಸಮಿತಿಯ ರಚನೆಯ ನಂತರ ಸಭೆ ಸೇರಿ ಯಾವ್ಯಾವ ಜಾಗಗಳಲ್ಲಿ ಬೀದಿ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಆಯುಕ್ತೆ ಸಭೆೆಗೆ ಮಾಹಿತಿ ನೀಡಿದರು. ನಗರದ ಆಯ್ದ ಭಾಗಗಳಲ್ಲಿ ಮಾತ್ರ ಬೀದಿ ಬದಿ ವ್ಯಾಪಾರಸ್ಥರಿಗೆ ಅವಕಾಶ ಕೊಡಲಾಗುವುದು. ಉಳಿದೆಡೆ ನೋ ಪಾರ್ಕಿಂಗ್ ರೀತಿ ಯಲ್ಲಿ ನೋ ವೆಂಡಿಂಗ್ ನಾಮ ಫಲಕ ಅಳವಡಿಸಲಾಗುವುದು. ಈ ವ್ಯಾಪಾರಸ್ಥರು ಇರುವ ಜಾಗಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆಗಳನ್ನು ಪಾಲಿಕೆ ಕಲ್ಪಿಸಬೇಕಾಗುತ್ತದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News