×
Ad

ಪುರಸಭೆ ಸಿಬ್ಬಂದಿಗೆ ಅಧಿಕಾರಿಗಳಿಂದ ಕಿರುಕುಳ: ದೂರು ದಾಖಲು

Update: 2016-09-03 21:59 IST

ತರೀಕೆರೆ, ಸೆ.3: ಪಟ್ಟಣದ ಪುರಸಭೆಯ ದ್ವಿತೀಯ ದರ್ಜೆ ಸಹಾಯಕಿ ಟಿ.ಪುಷ್ಪಾ ಎಂಬುವರಿಗೆ ಮುಖ್ಯಾಧಿಕಾರಿ ಹಾಗೂ ಇತರ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಟಿ.ಪುಷ್ಪಾ ನೀಡಿದ ದೂರಿನ ಅನ್ವಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ

       ಪ್ರಕರಣದ ಹಿನ್ನೆಲೆ: ಸಿಬ್ಬಂದಿ ಟಿ.ಪುಷ್ಪಾ ಅವರಿಗೆ ಇತ್ತೀಚೆಗೆ ಭದ್ರಾವತಿ ನಗರ ಸಭೆಗೆ ವರ್ಗವಾಗಿತ್ತು. ವರ್ಗಾವಣೆಗೆ ತಡೆನೀಡಲು ಕೋರಿ ಪುಷ್ಪಾ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಕಾರಣ ನ್ಯಾಯಾಲಯವು ವರ್ಗವಣೆ ಆದೇಶಕ್ಕೆ ತಡೆ ನೀಡಿತ್ತು. ನ್ಯಾಯಾಲಯದ ಆದೇಶ ಪ್ರತಿಯನ್ನು ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಸ್ವೀಕರಿಸದೆ ಟಿ.ಪುಷ್ಪಾ ಅನುಪಸ್ಥಿತಿಯಲ್ಲಿ ಸೆ.2ರಂದು ರೆವಿನ್ಯೂ ಇನ್‌ಸ್ಪೆಕ್ಟರ್ ರಮೇಶ್, ರೆವಿನ್ಯೂ ಆಫೀಸರ್ ಮಂಜುನಾಥ್ ರೊಂದಿಗೆ ಸೇರಿ ಅವರ ಕೊಠಡಿಯ ಬಾಗಿಲ ಬೀಗ ಒಡೆದು ಮಹತ್ವದ ಕಡತಗಳ ವೀಡಿಯೊ ಚಿತ್ರೀಕರಣ ನಡೆಸಿ ಅತ್ಯಮೂಲ್ಯ ವಸ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ. ಇದರ ಬಗ್ಗೆ ಪ್ರಶ್ನಿಸಿದರೆ ನನ್ನ ಮೇಲೆ ದೌರ್ಜನ್ಯ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 ಪುರಸಭೆ ಅಧ್ಯಕ್ಷರ ಪ್ರತಿಕ್ರಿಯೆ: ವೀಡಿಯೊ ಪ್ರಕರಣದ ಬಗ್ಗೆ ಮುಖ್ಯಾಧಿಕಾರಿಗಳು ನನಗೆ ಮಾಹಿತಿ ನೀಡಿಲ್ಲ. ವರ್ಗಾವಣೆ ಪ್ರಕರಣವು ಆಡಳಿತಾತ್ಮಕ ವಿಷಯವಾಗಿದೆ ಎಂದು ಸಬೂಬು ನೀಡಿದ್ದಾರೆ. ಪ್ರಕರಣದ ಬಗ್ಗೆ ತಮಗೆ ವಿಷಾದವಿದೆ. ಪುಷ್ಪಾ ಸೆ.2 ರಂದು ರಜೆ ಪಡೆದು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾಗ ಪ್ರಕರಣ ನಡೆದಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News