×
Ad

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಕೊಡಗಿನ ಗಜಪಡೆಗಳ ದರ್ಬಾರ್

Update: 2016-09-03 22:02 IST

ಮಡಿಕೇರಿ, ಸೆ.3: ಮೈಸೂರು ದಸರಾ ಜಂಜೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಗಜಪಡೆಗಳ ಪೈಕಿ ಕೊಡಗಿನ ಆನೆ ಶಿಬಿರಗಳಿಂದ ತೆರಳಿರುವ ಗಜಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹವಾಗಿದೆ.
ಜಂಬೂ ಸವಾರಿಯಲ್ಲಿ ಈ ಬಾರಿ ಸುಮಾರು 12 ಆನೆಗಳು ಭಾಗವಹಿಸುತ್ತಿದ್ದು, ಇವುಗಳಲ್ಲಿ ಕೊಡಗಿನ ಒಂಭತ್ತು ಸಾಕಾನೆಗಳಿರುವುದು ವಿಶೇಷ. ಕೊಡಗಿನ ಆನೆಕಾಡು, ಮತ್ತಿಗೋಡು, ಮೂರ್ಕಲ್, ದುಬಾರೆ ಆನೆ ಶಿಬಿರಗಳಲ್ಲಿರುವ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿವೆ.
ಒಂಬತ್ತು ಆನೆಗಳು ಕೂಡ ಮೈಸೂರು ದಸರಾದಲ್ಲಿ ಪಾಲ್ಗೊಂಡು ಜಂಬೂ ಸವಾರಿಯ ಸಂದರ್ಭ ಒಂದೊಂದು ರೀತಿಯ ಜವಾಬ್ದಾರಿ ವಹಿಸುತ್ತಿವೆ. ಕಾಡಿನ ನಡುವೆ ಇರುವ ಆನೆ ಶಿಬಿರಗಳಲ್ಲಿ ಇದ್ದರೂ ದಸರಾ ಸಂದರ್ಭ ಸಾಂಸ್ಕೃತಿಕ ನಗರಿ ಮೈಸೂರು ನಗರದ ಗೌಜು, ಗದ್ದಲಗಳಿಗೆ ವಿಚಲಿತರಾಗದೆ ಗಂಭೀರವಾಗಿ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬರುತ್ತಿವೆ.
ಅದರಲ್ಲಿ ಪ್ರಮುಖವಾದದು 14 ಬಾರಿ ಅಂಬಾರಿ ಹೊತ್ತ ಬಲರಾಮ, ಸಂಗೀತ ಗಾಡಿ ಎಳೆಯುವ ಅಭಿಮನ್ಯು, ಹೆಣ್ಣು ಆನೆ ವಿಜಯಾ, ಪ್ರಶಾಂತ, ವಿಕ್ರಮ, ಗೋಪಿ, ಹರ್ಷ ಆನೆಗಳು ಕೊಡಗಿನ ಆನೆಗಳು ಎಂಬುದು ಜಿಲ್ಲೆಯವರಿಗೆ ಸಂತಸದ ಸಂಗತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News