ನಾಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ
Update: 2016-09-04 13:15 IST
ಬೆಂಗಳೂರು, ಸೆ.4: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಸೋಮವಾರ ನಡೆಯಲಿದ್ದು, ಸಂಜೆ 4:00 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.
ವಿಜಯ ನಗರದ ಶಾಸಕ ಎಂ.ಕೃಷ್ಣಪ್ಪಗೆ ಸಚಿವ ಸ್ಥಾನ, ರಾಜ್ಯ ಸಚಿವರಾಗಿರುವ ಎ.ಮಂಜು ಮತ್ತು ವಿನಯ್ ಕುಲಕರ್ಣಿಗೆ ಕ್ಯಾಬಿನೆಟ್ ಸಚಿವರಾಗಿ ಭಡ್ತಿ ದೊರೆಯುವ ಸಾಧ್ಯತೆ ಇದೆ. ಎಂ.ಕೃಷ್ಣಪ್ಪ ಅವರಿಗೆ ವಸತಿ ಖಾತೆ ಸಿಗಲಿದೆ ಎಂದು ತಿಳಿದು ಬಂದಿದೆ.