×
Ad

ಜಾತಿ ದೌರ್ಜನ್ಯ ಮೆಟ್ಟಿ ನಿಲ್ಲಲು ಗಣೇಶ ಹಬ್ಬ ಕಾರಣವಾಗಲಿ: ಶಾಸಕ ಸಿ.ಟಿ.ರವಿ

Update: 2016-09-04 22:09 IST

ಚಿಕ್ಕಮಗಳೂರು, ಸೆ.4: ದೇಶದಲ್ಲಿ ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ಲಕ್ಷಾಂತರ ಉತ್ಸವಗಳು ನಡೆಯುತ್ತಿದ್ದರೂ ಜಾತಿ, ದೌರ್ಜನ್ಯ ಹಾಗೂ ಅನ್ಯ ಸಂಸ್ಕೃತಿ ನಡುವೆಯೂ ಗಣೇಶೋತ್ಸವ ಮಾತ್ರ ಪ್ರಶ್ನಾತೀತವಾಗಿ ನಡೆಯುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

 ಅವರು ರವಿವಾರ ನಗರದ ಕಲ್ಯಾಣನಗರ ವೆಲ್‌ಫೆೇರ್ ಟ್ರಸ್ಟ್ ಆಶ್ರಯದಲ್ಲಿ ಶ್ರೀಮಹಾಗಣಪತಿ ದೇವಸ್ಥಾನ ಆವರಣದಲ್ಲಿ ನಿರ್ಮಿಸಿರುವ ಸಭಾಭವನ ಉ್ಘಾಟಿಸಿ ಮಾತನಾಡಿದರು.

ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜನರನ್ನು ಸಂಘಟನೆ ಮಾಡುವ ಸಲುವಾಗಿ ಬಾಲಗಂಗಾಧರ್ ತಿಲಕರು ಈ ಉತ್ಸವವನ್ನು ಆರಂಭಿಸಿದರು. ದೇಶದಲ್ಲಿ ಜಾತಿ, ದೌರ್ಜನ್ಯವನ್ನು ಮೆಟ್ಟಿ ನಿಲ್ಲಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದು ಹೇಳಿದರು. ನಗರೋತ್ಥಾನ ಯೋಜನೆಗೆ ಕೇಂದ್ರ ಸರಕಾರದಿಂದ 126 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ಶೇ.30ರಷ್ಟು ಹಣ ಈಗಾಗಲೇ ನಗರಸಭೆಗೆ ಬಂದಿದೆ. ನಗರದ ಕೆಲವು ಭಾಗಕ್ಕೆ 24x

7 ನೀರು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನಗರಸಭೆಯ ಕರ-ತೆರಿಗೆಗಳನ್ನು ಸರಿಯಾಗಿ ಪಾವತಿಸಬೇಕು. ನೀರನ್ನು ಪೋಲು ಮಾಡದೇ ಬಳಸುವುದು ಅಗತ್ಯ ಎಂದರು. ನಗರಸಭೆೆ ಸದಸ್ಯ ಎಚ್.ಡಿ. ತಮ್ಮಯ್ಯ ಮಾತನಾಡಿದರು. ಇದೇ ಸಂದರ್ಭ ಕಟ್ಟಡಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಬಿ.ಪಿ. ಮಹೇಂದ್ರ ಕುಮಾರ್, ಖಜಾಂಚಿ ಟಿ.ಎಸ್.ರಾಮಾನಾಯಕ್, ಉಪಾಧ್ಯಕ್ಷ ಡಿ.ಪಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ನೀಲಕಂಠ ಕಾರ್ಯಕ್ರಮ ನಿರೂಪಿಸಿದರು. ಚಂದ್ರವೌಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News