×
Ad

ಆಧುನಿಕ ‘ಮೊಬೈಲ್ ಡಯಾಗ್ನೊಸ್ಟಿಕ್’ ಬಸ್‌ಗೆ ಚಾಲನೆ

Update: 2016-09-04 23:38 IST

ಬೆಂಗಳೂರು, ಸೆ.4: ನಗರದ ವ್ಯಾಪ್ತಿಯಲ್ಲಿ ಉಚಿತವಾಗಿ ಗುಣಮಟ್ಟದ ಡಯಾಗ್ನೊಸ್ಟಿಕ್ ಸೌಲಭ್ಯ ಒದಗಿಸುವ ಮತ್ತು ಕ್ಯಾನ್ಸರ್ ಸೇರಿ ಇನ್ನಿತರ ರೋಗಪತ್ತೆ ಮಾಡುವ ವಿಶೇಷ ಬಸ್‌ಯೊಂದನ್ನು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

   ನಗರದ ಪುರಭವನದಲ್ಲಿ ಮಾರವಾರಿ ಯುವ ಮಂಚ್ ಆಯೋಜಿಸಿದ್ದ ಸಮಾರಂಭ ದಲ್ಲಿ ‘ಕ್ಯಾನ್ಸರ್ ಜಾಗೃತಿ ಕರ್ನಾಟಕ ಕಾರ್ಯಕ್ರಮದ ಆಧುನಿಕ ಮೊಬೈಲ್ ಡಯಾಗ್ನೊಸ್ಟಿಕ್ ಬಸ್’ನ್ನು ಚಾಲನೆ ನೀಡಿ ಮಾತನಾಡಿದ ಅವರು, ಇದೀಗ ಎಲ್ಲೆಡೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಸಂಘಟನೆಗಳು ಸಮಾಜಕ್ಕೆ ಅನು ಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಿದರೆ, ರಾಜ್ಯ ಸರಕಾರವು ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಮಾರವಾರಿ ಸಮುದಾಯವು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, ರೋಗಗಳ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು. ಯಾವುದೇ ರೋಗವಿರಲಿ ಮೊದಲನೆ ಹಂತದಲ್ಲಿಯೇ ವೈದ್ಯರ ಸಲಹೆ ಪಡೆದರೆ, ಚಿಕಿತ್ಸೆ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಂಕರ್ ಕ್ಯಾನ್ಸರ್ ಆಸ್ಪತ್ರೆಯ ಡಾ.ಬಿ.ಎಸ್.ಶ್ರೀನಾಥ್, ಎಸ್-ವ್ಯಾಸ ಯೋಗ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಗುರೂಜಿ, ಮಾರವಾರಿ ಯುವ ಮಂಚ್‌ನ ರವಿ ಅಗರ್‌ವಾಲ್, ಸುನಿಲ್‌ಶಾ ಹಾಜರಿದ್ದರು.

‘ಮೊಬೆಲ್  ಡಯಾಗ್ನೊಸ್ಟಿಕ್  ಬಸ್ ಬಗ್ಗೆ  ಒಂದಿಷು್ಟ...
ಬೆಂಗಳೂರಿನ ಗಾಂಧಿ ನಗರ, ಚಿಕ್ಕಪೇಟೆ, ರಾಜಾಜಿನಗರ,ಆರ್‌ಆರ್‌ನಗರ, ಜಯನಗರ ಸೇರಿ ಎಲ್ಲೆಡೆ ಈ ಬಸ್ಸು ಸಂಚರಿಸಲಿದ್ದು, ಕ್ಯಾನ್ಸರ್ ಪರೀಕ್ಷೆ ಸೇರಿ ಇನ್ನಿತರ ರೋಗಗಳ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9886106325, 8971989454ನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News