ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಿದ್ಯಾರ್ಥಿನಿ!

Update: 2016-09-06 11:39 GMT

ಚಾಮರಾಜ ಪೇಟೆ, ಸೆ.6: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 14 ವರ್ಷದ ವಿದ್ಯಾರ್ಥಿನಿಯೋರ್ವಳು ಆ.25ರಂದು ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ಈ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದುದು ನಮಗೆ ಗೊತ್ತೇ ಇರಲಿಲ್ಲ ಎಂದು ಶಾಲೆಯ ಸಿಬ್ಬಂದಿ ಹೇಳಿದ್ದಾರೆ.

ಕಳೆದ 2 ತಿಂಗಳುಗಳಿಂದ ಸೋಲಿಗ ಸಮುದಾಯದ ಈ ವಿದ್ಯಾರ್ಥಿನಿ ಶಾಲಾ ಸಮವಸ್ತ್ರ ಧರಿಸುವುದನ್ನು ನಿಲ್ಲಿಸಿ, ರವಿಕೆ, ಉದ್ದದ ಲಂಗ ಮತ್ತು ಶಾಲನ್ನು ಧರಿಸುತ್ತಿದ್ದಳು. ಆದರೂ ಆಕೆ ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಆಕೆಯನ್ನು ಯಾರೂ ಪ್ರಶ್ನಿಸಿರಲಿಲ್ಲ ಎಂದು ‘ದಿ ನ್ಯೂಸ್ ಮಿನಿಟ್ ಡಾಟ್ ಕಾಂ’ ವರದಿ ಮಾಡಿದೆ.

‘‘ಮಗುವಿನ ತಂದೆ ಶಿವು ಎಂಬಾತ ನನ್ನ ಸಂಬಂಧಿಕನೇ ಆಗಿದ್ದು, ಕಳೆದ 2 ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೆವು. ನಾನು ಗರ್ಭಿಣಿಯಾಗಿದ್ದು ನನ್ನ ತಾಯಿಗೆ ಮಾತ್ರ ಗೊತ್ತಿತ್ತು. ತಂದೆಗೆ ಹೇಳಿದರೆ ಮೊದಲೇ ಹಿಂಸಾಪ್ರವೃತ್ತಿಯವರಾದ ಅವರು ನನ್ನನ್ನು ಕೊಂದೇಬಿಡುತ್ತಾರೆ ಎಂದು ಅವರಿಗೆ ಹೇಳಿರಲಿಲ್ಲ. ನನ್ನ ತಾಯಿ ಮಗುವನ್ನು ತೆಗೆಸಲು ಹೇಳಿದ್ದರೂ ನಾನು ಅದಕ್ಕೆ ಒಪ್ಪಿರಲಿಲ್ಲ. ಹೆರಿಗೆಯಾದ ನಂತರ ಮಗುವನ್ನು ಕೊಂದುಬಿಡು. ಮನೆಗೆ ಕರೆತರಬೇಡ ಎಂದು ತಾಯಿ ಹೇಳಿದ್ದಾರೆ’’ ಎಂದು ಆ ಬಾಲಕಿ ಹೇಳಿದ್ದಾಳೆ.

ಹೆರಿಗೆಯಾದ ದಿನ ಬೆಳಗ್ಗೆ ಎಂದಿನಂತೆ ಈ ವಿದ್ಯಾರ್ಥಿನಿ ತಿಂಡಿ ತಿಂದು, ಕಾಫಿ ಕುಡಿದು ಬಟ್ಟೆ ಧರಿಸಿ ತರಗತಿಗೆ ಹೋಗಿದ್ದಾಳೆ. ಅರ್ಧಗಂಟೆಯ ನಂತರ ಹೆರಿಗೆ ನೋವು ಕಾಣಿಸಿಕೊಂಡು ಈಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂದರ್ಭದಲ್ಲಿ ಅಂಕಪ್ಪ ಎಂಬ ಶಿಕ್ಷಕ ಆಕೆಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋದರು ಎಂದು ಆಕೆ ಹೇಳಿದ್ದಾಳೆ.

ಫೋಟೊಗಳು: thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News