ಛಾಯಾಗ್ರಾಹಕ ಸಿಐಡಿ ಬಲೆಗೆ
Update: 2016-09-06 23:59 IST
ಬೆಂಗಳೂರು, ಸೆ.6: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಛಾಯಾಗ್ರಾಹಕನೊಬ್ಬನನ್ನು ಸಿಐಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ವಿದ್ಯಾರಣ್ಯಪುರ ಅಂಚೆಯ ಕೆನರಾ ಬ್ಯಾಂಕ್ ಲೇಔಟ್‌ನ ನಿವಾಸಿ ಸುಜಯ್ ಆರ್ಯ ಬ್ಯಾಂಕರ್ ಎಂದು ಸಿಐಡಿ ತಿಳಿಸಿದೆ.
ಆರೋಪಿ ಸುಜಯ್ ವೃತ್ತಿಯಲ್ಲಿ ಛಾಯಾಗ್ರಾಹಕ ನಾಗಿದ್ದು, ಈತ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಸಿಐಡಿ ಹೇಳಿದೆ.