×
Ad

ಕಾಡಾನೆ ದಾಳಿಯಂದ ಸಾವು : ಭೀತಿಯ ವಾತಾವರಣ

Update: 2016-09-07 13:27 IST

ಸಿದ್ಧಾಪುರ,ಸೆ.7: ಹಗಲಲ್ಲಿ ರಸ್ತೆಗಿಳಿದ ಆನೆ ಸ್ಕೂಟರ್ ಸವಾರನನ್ನು ಸೊಂಡಿಲಿನಿಂದ ಎತ್ತಿ ಎಸೆದು ಕೊಲೆಗೈದ ಘಟನೆ ನಂತರ ಕೊಡಗಿನ ಕೇರಳ ಗಡಿಭಾಗದ ಗ್ರಾಮಗಳಲ್ಲಿ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ. ಸಿದ್ಧಾಪುರ - ಪಾಲಿಬೆಟ್ಟ ರಸ್ತೆಯಲ್ಲಿ ಸ್ಕೂಟರ್ ಪ್ರಯಾಣಿಕನನ್ನು ಆನೆ ಕೊಲೆಗೈದ  ಘಟನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಭವಿಸಿದೆ ಎಂದು ಆಕ್ರೋಶಗೊಂಡಿರುವ ಗ್ರಾಮೀಣರು ಅರಣ್ಯ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ನಂತರ ಕರ್ನಾಟಕದ ಉನ್ನತಾಧಿಕಾರಿಗಳ ಮಧ್ಯಪ್ರವೇಶದಿಂದಾಗಿ ಮಂಗಳವಾರದಿಂದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭವಾಗಿದ್ದು, ಇದು ಗಡಿಭಾಗದ ಅರಣ್ಯಕ್ಷೇತ್ರದಲ್ಲಿ ಭೀತಿಗೆ ಕಾರಣವಾಗಿದೆ ಎನ್ನಲಾಗಿದೆ.

  ಕೊಡಗು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಕಣ್ಣೂರು-ವಯನಾಡ್ ಜಿಲ್ಲೆಗಳ ಮೀಸಲು ಅರಣ್ಯಗಳಿಗೆ ಆನೆಗಳು ಗುಂಪುಗುಂಪಾಗಿ ಬರುತ್ತಿವೆ ಎಂದು ಅರಣ್ಯದಲ್ಲಿ ನಿರೀಕ್ಷಣಾನಡೆಸುವವರು ವರದಿ ನೀಡಿದ್ದಾರೆ. ಕೊಡಗಿನಲ್ಲಿ ಕಳೆದ ಹತ್ತುದಿವಸಗಳಲ್ಲಿ ಆನೆ ದಾಳಿಗೆ ಸಿಕ್ಕಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಈ ವರ್ಷದಲ್ಲಿ ಐದು ಮಂದಿ ಆನೆಗಳಿಗೆ ಬಲಿಯಾಗಿದ್ದಾರೆ.ಕಳೆದ ವರ್ಷ ಹದಿಮೂರು ಮಂದಿ ಆನೆದಾಳಿಗೆ ಬಲಿಯಾಗಿದ್ದಾರೆ. ಪುಷ್ಪಗಿರಿ, ಬ್ರಹ್ಮಗಿರಿ. ತಲಕಾವೇರಿ ಕಾಡುಪ್ರಾಣಿಗಳ ಸಂರಕ್ಷಣಾವಲಯದಲ್ಲಿ ನಿರಂತರ ಆನೆಗಳ ಸಂಖ್ಯೆಗಳಲ್ಲಿ ಅಭಿವೃದ್ಧಿಯಾಗುತ್ತಿವೆ. ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಸಂಖ್ಯೆಗಳಲ್ಲಿ ಶೇ. 30ರಷ್ಟು ಹೆಚ್ಚಳವಾಗಿದೆ ಎಂದು ಲೆಕ್ಕ ಹಾಕಲಾಗಿದ್ದು,ಕೊಡಗು ಜಿಲ್ಲೆಯ 1.34 ಲಕ್ಷ ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶದ ಮೂರರಲ್ಲೊಂದು ಭಾಗ ಕೇರಳದ ಗಡಿ ಪ್ರದೇಶಗಳಲ್ಲಿ ಹರಡಿಕೊಂಡಿವೆ.

  ಕಾಡಿನಲ್ಲಿ ಆನೆಗಳು ಹೆಚ್ಚಿವೆ.ಆದರೆ ಅವುಗಳಿಗನುಗುಣವಾಗಿ ಆಹಾರ ಮತ್ತು ವಿಹಾರ ಪ್ರದೇಶ ಇಲ್ಲದಂತಾಗಿದೆ. ಹೀಗಾಗಿ ಊರಿನ ತೋಟಗಳನ್ನು ಆನೆದಂಡುಗಳು ಪ್ರವೇಶಿಸುತ್ತಿವೆ. ಈ ಪ್ರದೇಶದಲ್ಲಿ ಹೆಚ್ಚಿನ ತೋಟಗಳನ್ನು ಕೇರಳಮೂಲದವರೇ ಹೊಂದಿದ್ದಾರೆ. ಆನೆಗಳ ಹಾವಳಿ ಹೆಚ್ಚಾದಾಗ ಫಾರೆಸ್ಟ್ ಇಲಾಖೆ ಆನೆ ಓಡಿಸುವ ಕ್ರಮವನ್ನೆತ್ತಿಕೊಳ್ಳುತ್ತಿದೆ. ಹೀಗೆ ಮರಳಿ ಕಾಡು ಸೇರುವ ಆನೆಗಳು ಬೇರೆ ಕಡೆಗಳಿಗೆ ಸಂಚರಿಸುತ್ತಿವೆ. ವಯನಾಡ್, ಕಣ್ಣೂರು ಜಿಲ್ಲೆಗಳ ಗಡಿ ಗ್ರಾಮಗಳಲ್ಲಿ ಆನೆಗಳ ಹಾವಳಿ ದಿನನಿತ್ಯದ ಘಟನೆಯಾಗಿ ಪರಿಣಮಿಸಿದೆ. ಇದು ಕರ್ನಾಟಕದ ಸಮಸ್ಯೆಯಿಂದಾಗಿ ಸೃಷ್ಟಿಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

    ಇರಿಟ್ಟಿ ಪ್ರದೇಶದ ಕಾಡುಗಳಲ್ಲಿ ಸುರಕ್ಷಿತ ಬೇಲಿ ಕಟ್ಟುವ ಕೆಲಸ ಇನ್ನೂ ಜಾರಿಗೆ ಬಂದಿಲ್ಲ. ಇಲ್ಲಿನ ರೆವೆನ್ಯೂ ಭೂಮಿಯು ಖಾಸಗಿ ಜಮೀನಿನಲ್ಲಿ ಹಾದುಹೋಗಿರುವುದರಿಂದಾಗಿ ಯಾರು ಯಾರನ್ನು ಸಂರಕ್ಷಿಸಬೇಕೆಂಬ ತಗಾದೆ ಸೃಷ್ಟಿಯಾಗಿದೆ ಎನ್ನುತ್ತಿರುವ ತೋಟಗಳಲ್ಲಿ ಕೆಲಸ ಮಾಡುವವರು "ನಮ್ಮ ಜೀವ ಅಪಾಯದಲ್ಲಿದೆ" ಎಂದು ಅವಲತ್ತುಕೊಳ್ಳುತ್ತಿದ್ದಾರೆ. ಕೋಟ್ಟಿಯೂರ್ ಪ್ರದೇಶ, ಆರಳದಲ್ಲಿಆನೆಹಾವಳಿ ತಡೆಯಲು ತಡೆ ಗೋಡೆಕಟ್ಟುವ ಕೆಲಸ ಚಾಲನೆಯಲ್ಲಿದೆ. ವಯನಾಡ್ ಜಿಲ್ಲೆಯ ತೋಲ್‌ಪೆಟ್ಟಿ-ಭಾವಲಿ ಪ್ರದೇಶಗಳಲ್ಲಿ ಆನೆಯ ಭೀತಿ ಸೃಷ್ಟಿಯಾಗಿದೆ. ಕಬಿನಿ ನದಿ ತೀರದ ಈ ಪ್ರದೇಶದಲ್ಲಿ ಆನೆ ಹಾವಳಿ ತಡೆಯುವ ಸುರಕ್ಷಿತ ಕವಚಗಳಿದ್ದರೂ ಇದೀಗ ಕರ್ನಾಟಕದಿಂದ ಆನೆಗಳ ಗುಂಪಾದ ಪಲಾಯನದಿಂದಾಗಿ ಇಲ್ಲಿನ ಅರಣ್ಯ ರಕ್ಷಕರಿಗೆ ಸವಾಲು ಎದುರಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News