×
Ad

ಹಸಿರು ತರಕಾರಿಗಳನ್ನು ಬಳಸಿ ರಕ್ತ ಹೀನತೆ ತಡೆಗಟಿ

Update: 2016-09-07 22:25 IST

ಸುಂಟಿಕೊಪ್ಪ, ಸೆ.7: ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳು ಪೌಷ್ಟಿಕ ಆಹಾರವಾದ ಸೊಪ್ಪು,ತರಕಾರಿ, ಕಾಳುಗಳನ್ನು ಹೆಚ್ಚಾಗಿ ಬಳಸುವುದರಿಂದ ಆರೋಗ್ಯ ಕಾಪಾಡಬಹುದು ಎಂದು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಯ ಆರೋಗ್ಯ ಸಹಾಯಕಿ ಪ್ಯಾನ್ಸಿ ಬೂಥರ್ ಹೇಳಿದರು. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹದ ಕಾರ್ಯಕ್ರಮವನ್ನು ವಿವಿಧ ಸೊಪ್ಪು, ಕಾಳು, ತರಕಾರಿ ಪದಾರ್ಥಗಳನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ಬಾಣಂತಿಯರು ನುಗ್ಗೆಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತ ಹೀನತೆ ತಡೆಗಟ್ಟಬಹುದು. ನುಗ್ಗೆಸೊಪ್ಪಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಪೋಟಾಷಿಯ ಅಧಿಕವಾಗಿರುತ್ತದೆ. ಕರಿಬೇವಿನ ಸೊಪ್ಪು ಸಹ ಅಗತ್ಯವಾಗಿ ಸೇವಿಸಬೇಕು. ತೋಟಗಳಲ್ಲಿ ಸಿಗುವ ಕಾಗೆಸೊಪ್ಪುನ್ನು ಬಾಣಂತಿಯರು ವಾರದಲ್ಲಿ 2ದಿನ ಸೇವಿಸಬೇಕು. ಪುಟ್ಟ ಮಕ್ಕಳಿಗೆ ಮೊಟ್ಟೆ, ಹಾಲು ಕೊಡುವುದರಿಂದ ತೂಕ ಕಡಿಮೆಯಾಗುವುದನ್ನು ತಪ್ಪಿಸಬಹುದು. ಮೊಳಕೆ ಬರಿಸಿದ ಕಾಳುಗಳು, ಪಪ್ಪಾಯಿ, ಸೌತೆಕಾಯಿ, ಈರುಳ್ಳಿ, ಕ್ಯಾರೆಟ್ ಮಿಶ್ರಿತ ತುರಿತ ಪದಾರ್ಥಗಳನ್ನು ಆಹಾರವಾಗಿ ಬಳಸುವುದರಿಂದ ಶಿಶುಮರಣ ಮತ್ತು ತಾಯಿ ಮರಣ ಪ್ರಕರಣ ಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

 ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಖಾಹಾರ ಪ್ರಿಯರು ಹೆಚ್ಚಾಗಿದ್ದಾರೆ. ಅದರೊಂದಿಗೆ ಗರ್ಭಿಣಿಯರು ಮತ್ತು ಬಾಣಂತಿಯರು ಆಹಾರ ಇಲಾಖೆ ಮಾಹಿತಿ ನೀಡಿದಂತೆ ಅನುಸರಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

  ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಜ್ಯೋತಿ ಭಾಸ್ಕರ್ ಸುಂಟಿಕೊಪ್ಪ, ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕತೆಯರು, ಆಶಾ ಕಾರ್ಯರ್ತರು, ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಹಾಗೂ ಪುಟ್ಟ ಮಕ್ಕಳು ಉಪಸ್ಥಿತರಿದ್ದರು.

ಅಂಗನವಾಡಿ ಶಿಕ್ಷಕಿಯರಾದ ಜೆಸ್ಸಿ ಡಿಸೋಜ ಪ್ರಾರ್ಥಿಸಿದರು. ಅಂಗನವಾಡಿ ಶಿಕ್ಷಕಿ ಜಯಂತಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News