ಜೆಸಿಬಿ ವಾಹನಕ್ಕೆ ಶಾಸಕರಿಂದ ಚಾಲನೆ
Update: 2016-09-08 21:39 IST
ಅಂಕೋಲಾ, ಸೆ.8: ಸ್ಥಳೀಯ ಪುರಸಭೆಯವರು ನೈರ್ಮಲ್ಯ ನಿರ್ವಹಣೆ ಕಾರ್ಯಕ್ಕಾಗಿ 25 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿರುವ ಜೆಸಿಬಿ ವಾಹನಕ್ಕೆ ಗುರುವಾರ ಶಾಸಕ ಸತೀಶ ಸೈಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯತ್ ಪುರಸಭೆಯಾಗಿ ಪರಿವರ್ತನೆಯಾಗಿದ್ದರಿಂದ ನೈರ್ಮಲ್ಯ ನಿರ್ವಹಣೆಯ ವ್ಯಾಪ್ತಿ ವಿಸ್ತಾರವಾಗಿದೆ. ಪುರಸಭೆಯ ಮೂಲೆ ಮೂಲೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೆ ಜೆಸಿಬಿಯನ್ನು ಸೂಕ್ತವಾಗಿ ಬಳಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಾಸ್ಕರ ನಾರ್ವೇಕರ, ಉಪಾಧ್ಯಕ್ಷೆ ಲಕ್ಷ್ಮೀ ನಾಯ್ಕ, ಸದಸ್ಯರಾದ ಸಂದೀಪ ಬಂಟ, ವಿಶ್ವನಾಥ ನಾಯ್ಕ, ಮಂಜುನಾಥ ನಾಯ್ಕ, ಅಂಜಲಿ ಐಗಳ, ಸುಕ್ರು ಗೌಡ, ನಾಗೇಂದ್ರ ನಾಯ್ಕ, ಕೃಷ್ಣಕುಮಾರ ಮಹಾಲೆ, ಸೀಮಾ ಬಂಟ, ಮಹಾಲಕ್ಷ್ಮೀ, ಲಕ್ಷ್ಮೀ ನರಸಯ್ಯ, ಪುರಸಭೆ ಮುಖ್ಯಾಧಿಕಾರಿ ಜಿ.ಎನ್. ನಾಯ್ಕ, ಸಿಬ್ಬಂದಿ ಆರ್.ಎಲ್. ರಾಠೋಡ, ಭಾಸ್ಕರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.