×
Ad

ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

Update: 2016-09-08 21:45 IST

  ಕುಶಾಲನಗರ,ಸೆ.8: ಕೂಡಿಗೆ ಗ್ರಾಪಂ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲುಬೆಟ್ಟ ವ್ಯಾಪ್ತಿಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ.

  ಬಾಣಾವರದ ಮೀಸಲು ಅರಣ್ಯದಿಂದ ಧಾವಿಸಿರುವ ಕಾಡಾನೆ ಹಿಂಡುಗಳನ್ನು ತಪ್ಪಿಸಲು, ಇತ್ತೀಚೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಅರಣ್ಯ ಇಲಾಖೆಯವರು ಕಂದಕಗಳನ್ನು ನಿರ್ಮಿಸಿದ್ದಾರೆ. ಆದರೆ ಕಂದಕ ನಿರ್ಮಿಸುವ ಜಾಗದಲ್ಲಿ ಕಲ್ಲು ಬಂಡೆಗಳು ಸಿಕ್ಕಿವೆ ಎಂಬ ನೆಪದಿಂದ ಕಂದಕ ತೋಡದಿರುವ ಜಾಗದಲ್ಲಿ ಆನೆಗಳು ಹೊಲ ಮತ್ತು ಗದ್ದೆಗಳಿಗೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯ ರೈತರಾದ ಗೋಪಾಲನವರು ಹೇಳಿಕೆ ನೀಡಿದರು. ಕೃಷ್ಣ, ಚಂದ್ರಶೇಖರ್ ಎಂಬವರ ಜಮೀನುಗಳಿಗೆ ಆನೆಗಳ ಹಿಂಡು ದಾಳಿ ಮಾಡಿದ್ದು, ಬೆಳೆದಿದ್ದ ಜೋಳ, ಗೆಣಸು, ಕೇನೆಗಳನ್ನು ತುಳಿದು ನಷ್ಟ ಪಡಿಸಿವೆ. ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಕಂದಕಗಳನ್ನು ನಿರ್ಮಿಸಿರುವುದು ಸರಿಯಾದ ಕ್ರಮವಲ್ಲವೆಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

  ಸರಕಾರದ ಹಣವನ್ನು ಸರಿಯಾಗಿ ಬಳಸಿಕೊಳ್ಳದೆ ತಮ್ಮಗೆ ಇಷ್ಟ ಬಂದ ಹಾಗೆ ಬಳಸಿಕೊಂಡು ಆನೆ ಕಂದಕಗಳನ್ನು ನಿರ್ಮಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತವು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ನಿರ್ಮಿಸಿರುವ ಕಂದಕಗಳ ನಿಜಾಂಶಗಳನ್ನು ಪರಿಶೀಲಿಸಿ ಸರಿಪಡಿಸಬೇಕು ಹಾಗೂ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಗ್ರಾಪಂ ಸದಸ್ಯರಾದ ಟಿ.ಕೆ.ವಿಶ್ವನಾಥ್ ಆಗ್ರಹಿಸಿದರು.

ಗ್ರಾಮ ವ್ಯಾಪ್ತಿಯಲ್ಲಿ ಆನೆ ದಾಳಿಯಿಂದ ಜೀವಹಾನಿಯಾದರೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News