×
Ad

ಸ್ವಜಾತಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮಡಿಕೇರಿ ನಗರಸಭೆ ಚುನಾವಣೆಗೆ ಸಂಸದ ಪ್ರತಾಪ್ ಗೈರಾದರೆ ?

Update: 2016-09-10 16:16 IST

ಮಡಿಕೇರಿ, ಸೆ. 10 : ಇಲ್ಲಿನ ನಗರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಗೈರು ಹಾಜರಾಗಿದ್ದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತು ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.  ಸ್ವಜಾತಿ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಆಭ್ಯರ್ಥಿ ಕಾವೇರಮ್ಮ ಅವರು ಜಯಗಳಿಸಬೇಕೆಂಬ ಕಾರಣಕ್ಕೇ ಸಂಸದ ಪ್ರತಾಪ್  ಚುನಾವಣೆಗೆ ಗೈರಾಗಿದ್ದರು ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
  ‘‘ಕೊಡಗು ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಓಟು ಹಾಕದ ಹಿನ್ನೆಲೆಯಲ್ಲಿ ಬಿಜೆಪಿಗೆ ಸೋಲಾಯಿತು. ಸಂಸದರು ಅನ್ಯ ಕಾರ್ಯಕ್ರಮ ನಿಮಿತ್ತ ಬ್ಯುಸಿ ಆಗಿದ್ದರು ಎನ್ನಲಾಗಿತ್ತು. ವಾಸ್ತವವಾಗಿ ಬಿಜೆಪಿಯಿಂದ ಅಧ್ಯಕ್ಷ ಅಭ್ಯರ್ಥಿಯಾಗಿದ್ದವರು ಅನಿತಾ ಪೂವಯ್ಯ ಎಂಬ ಕೊಡವ  ಮಹಿಳೆ. ಕಾಂಗ್ರೆಸ್ಸಿನಿಂದ ಅಧ್ಯಕ್ಷಗಾದಿಗೆ ಸ್ಪರ್ಧಿಸಿದ್ದವರು ಕಾವೇರಮ್ಮ ಎಂಬ ಒಕ್ಕಲಿಗ ಮಹಿಳೆ. ಕಾಂಗ್ರೆಸ್ಸಿನ ಒಕ್ಕಲಿಗ ಮಹಿಳೆಯನ್ನು ಗೆಲ್ಲಿಸಲಿಕ್ಕಾಗಿಯೇ ಪ್ರತಾಪ್ ಸಿಂಹ ಮತದಾನದಿಂದ ತಪ್ಪಿಸಿಕೊಂಡರು.’’ ಎಂಬ ಮಾತುಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿಯನ್ನು ಮುಗುಗರಕ್ಕೀಡು ಮಾಡಿದೆ.
  ಸಂಸದರು ಹುಬ್ಬಳ್ಳಿಯಲ್ಲಿನ ಯುವ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರಣ ಚುನಾವಣೆಗೆ ಬರಲಾಗಲಿಲ್ಲ ಎಂದು ಬಿಜೆಪಿ ಕೊಡಗಿನ ಜನತೆಗೆ ಸಮಜಾಯಿಷಿ ನೀಡುತ್ತಿದೆ ಎನ್ನಲಾಗುತ್ತಿದೆ.


(ಪ್ರಚಾರದಲ್ಲಿರುವ ಪೋಸ್ಟರ್ )
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News