ಪರಿಹಾರ ನಿಧಿ ಚೆಕ್ ವಿತರಣೆ
Update: 2016-09-10 22:18 IST
ವೀರಾಜಪೇಟೆ,ಸೆ.9: ಮುಖ್ಯಮಂತ್ರಿ ಪರಿಹಾರ ನಿಧಿ ವತಿಯಿಂದ ನೀಡಲಾಗುವ ಚೆಕ್‌ನ್ನು ಶಾಸಕ ಕೆ.ಜೆ.ಬೋಪಯ್ಯ ಅವರು ಫಲಾನುಭವಿಗಳಿಗೆ ತಮ್ಮ ಕಚೇರಿಯಲ್ಲಿ ವಿತರಣೆ ಮಾಡಿದರು.
ತಾಲೂಕಿನ ಕಡಂಗಮರೂರು ಗ್ರಾಮದ ಕೆ.ಎನ್. ಪ್ರಮೀಳ ಅವರಿಗೆ 1,00,000, ರೂ. ಅಮ್ಮತ್ತಿ ಹೋಬಳಿ ಕಾವಾಡಿ ಗ್ರಾಮದ ಕೆ.ಎ. ರಾಬಿನ್ ಅವರಿಗೆ 50,000 ರೂ. ಹಾಗೂ ಕಾವಾಡಿ ಗ್ರಾಮದ ಎನ್.ಪಿ. ಭೀಮಯ್ಯ ಅವರಿಗೆ 50,000 ರೂ. ಗಳ ಚೆಕ್‌ನ್ನು ವಿತರಿಸಿದರು.
ಈ ಸಂದರ್ಭ ವೀರಾಜಪೇಟೆ ತಹಶಿಲ್ದಾರ್ ಮಹದೇವ ಸ್ವಾಮಿ, ಕಂದಯಾ ಪರಿವೀಕ್ಷಕ ಪಿ.ಎ.ಪಳಂಗಪ್ಪ, ಫೆಡರೇಷನ್‌ನ ಉಪಾಧ್ಯಕ್ಷ ಎಂ.ಮದು ದೇವಯ್ಯ, ಸುವಿನ್ ಗಣಪತಿ, ಇತರರು ಉಪಸ್ಥಿತರಿದ್ದರು.