‘ಕೃಷಿಪತ್ತಿನ ಸಹಕಾರಿ ಸಂಘಕ್ಕೆ 15.73 ಲಕ್ಷ ರೂ.ಲಾಭ’

Update: 2016-09-10 16:56 GMT

ಮೂಡಿಗೆರೆ, ಸೆ.10: ತಾಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶೇ.100ರಷ್ಟು ವಸೂಲಾತಿಯಾಗಿದ್ದು, 15.73 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಲ್.ಕಲ್ಲೇಶ್ ತಿಳಿಸಿದರು.

ಮಾಕೋನಹಳ್ಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿಯ ಲಾಭಾಂಶದಲ್ಲಿ ಶೇ.5ರಷ್ಟು ಷೇರು ಡಿವಿಡೆಂಡ್ ಅನ್ನು ಕೊಡುವುದಾಗಿ ಘೋಷಿಸಿದರು. ಸಂಘವು ಲಾಭದ ಹಾದಿಯಲ್ಲಿ ಮುನ್ನಡೆಯಲು ಸಹಕರಿಸಿದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಂಘದ ವ್ಯಾಪಾರ ಗುಮಾಸ್ತ ಎಂ.ಬಿ.ಕೃಷ್ಣೇಗೌಡ ಹಾಗೂ ಸಹಕಾರಿ ಅಭಿವೃದ್ಧಿ ಅಧಿಕಾರಿ ಸಿ.ಸಿ.ರುದ್ರೇಗೌಡರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದಭರ್ದಲ್ಲಿ ಎಂ.ಎನ್.ಅಶ್ವಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಇಲ್ಯಾಸ್, ಸಂಘದ ಉಪಾಧ್ಯಕ್ಷ ಎನ್.ಡಿ.ರಾಜೇಶ್, ಆಡಳಿತ ಮಂಡಳಿ ನಿರ್ದೇಶಕರಾದ ಜಿ.ಯು.ಚಂದ್ರೇಗೌಡ, ಪಿ.ಎಸ್.ಜಯರಾಮ್, ಜಿ.ಆರ್.ಜಯರಾಮ್, ಎಂ.ಎಸ್ ಅಣ್ಣೇಗೌಡ, ಎನ್.ಆರ್.ಬಿಂದು, ಪಿ.ಎಂ.ಸುಗುಣಮ್ಮ, ಅಣ್ಣಪ್ಪ, ಎಂ.ಎಸ್.ರಮೇಶ್, ಮೇಲ್ವಿಚಾರಕ ಮುಹಮ್ಮದ್, ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣೇಗೌಡ, ನಂದೀಪುರ ಗ್ರಾಪಂ ಅಧ್ಯಕ್ಷ ಎಂ.ಎಸ್.ರಮೇಶ್, ನಿರ್ದೇಶಕ ಎನ್.ಆರ್.ಪ್ರಸನ್ನ, ಮಾಜಿ ಅಧ್ಯಕ್ಷ ಎಂ.ಬಿ.ಪ್ರಭಾಕರ್, ಪ್ರಭಾರ ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ವಿಜೇಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News