ಮುಂದುವರಿದ ಕಾಡಾನೆ ಹಾವಳಿ ಕೃಷಿಕರಲ್ಲಿ ಆತಂಕ ಸೃಷ್ಟಿ

Update: 2016-09-10 17:02 GMT

ಸುಂಟಿಕೊಪ್ಪ, ಸೆ. 10: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮ್ಯಾಗಡೋರ್ ಪಾರ್ವತಿ ತೋಟಕ್ಕೆ ಒಂಟಿ ಸಲಗವೊಂದು ರಾತ್ರಿ ವೇಳೆ ಲಗ್ಗೆಯಿಟ್ಟು ಅಲ್ಲಿದ್ದ ಭಾರೀ ಗಾತ್ರದ ತೆಂಗಿನ ಮರವನ್ನು ಕೆಡವಿ ಹಾಕಿದ್ದು, ಅದು ಪಕ್ಕದಲ್ಲಿದ್ದ ಕೊಟ್ಟಿಗೆ ಮೇಲೆ ಬಿದ್ದು ಮೇಲ್ಛಾವಣಿ ಸಂಪೂರ್ಣ ಧ್ವಂಸಗೊಂಡಿರುವ ಘಟನೆ ವರದಿಯಾಗಿದೆ. ಬಳಿಕ ಕಾಫಿ ತೋಟಕ್ಕೆ ನುಗ್ಗಿದ ಸಲಗ ತೋಟದ ಬೇಲಿಯನ್ನು ತುಂಡರಿಸಿ ಕಾಫಿ ಗಿಡಗಳನ್ನು ತುಳಿದು ನಾಶಮಾಡಿವೆ. ಇದರಿಂದಾಗಿ ಸುಮಾರು 50 ಸಾವಿರ ರೂ. ಯಷ್ಟು ನಷ್ಟ ಸಂಭವಿಸಿದೆ ಎಂದು ತೋಟದ ಮಾಲಕ ಟಿ.ಕೆ.ಬಾನುಮತಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಹಲವು ತಿಂಗಳಿಂದ ಸುಂಟಿಕೊಪ್ಪಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿ ರೈತರ ಫಸಲನ್ನು ನಾಶಮಾಡುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕಾಡಾನೆಗಳನ್ನು ಹಿಡಿಯಬೇಕೆಂದು ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದರೂ ಅರಣ್ಯ ಇಲಾಖೆ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News