ತಾಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ: ಸಚಿವ ರಮೇಶ್‌ಕುಮಾರ್
ಬೆಂಗಳೂರು, ಸೆ.10: ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಆಯುಷ್ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ.
ನಗರದ ಅರಮನೆ ಮೈದಾನ ಆವರಣದಲ್ಲಿ ರಾಜ್ಯ ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಆಯೋಜಿಸಿದ್ದ ಆಯುಷ್ ವೈದ್ಯಾಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ಪ್ರತಿ ತಾಲೂಕುಗಳಲ್ಲಿಯೂ ಆಯುಷ್ ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಯುಷ್ ಪದ್ಧತಿಯಲ್ಲೇ ಚಿಕಿತ್ಸೆ ನೀಡಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲೂ ಆಯುಷ್ ವಿಂಗ್ ಸ್ಥಾಪನೆ, ಆಯುಷ್ ಔಷಧಗಳಿಗಾಗಿ ಪ್ರತ್ಯೇಕ ಾರ್ಮಸಿಯನ್ನು ಸ್ಥಾಪಿಸಲಾಗುವುದು. ಇನ್ನು ಆಯುಷ್ ವೈದ್ಯರಿಗೆ ಈಗಿರುವ ವೇತನವನ್ನು ಪರಿಷ್ಕರಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಐಎಎಸ್ ಅಧಿಕಾರಿ ಮದನಗೋಪಾಲ್, ಐಎ್ಎಸ್ ಅಧಿಕಾರಿಶ್ರೀಕಂಠಯ್ಯ, ಆಯುಷ್ ವೈದ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಡಾ.ರಾಜು ಶೇಟ್, ಅಧ್ಯಕ್ಷ ಶಂಕರಗೌಡ ಎಸ್.ಪಾಟೀಲ್ ಉಪಸ್ಥಿತರಿದ್ದರು.