×
Ad

ಭಟ್ಕಳದಲ್ಲಿ ಕುರ್ಬಾನಿಗಾಗಿ ತಂದ ಕುರಿಗಳ ಮೇಲೆ ನಾಯಿಗಳ ದಾಳಿ; 13ಕುರಿಗಳು ಬಲಿ

Update: 2016-09-11 17:47 IST

ಭಟ್ಕಳ, ಸೆ.11: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಲಿ ಕೊಡಲೆಂದು ತಂದಿದ್ದ ಕುರಿಗಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿ, 13 ಕುರಿಗಳನ್ನು ಬಲಿ ತೆಗೆದುಕೊಂಡ ಘಟನೆ ಭಟ್ಕಳದಲ್ಲಿ ಸಂಭವಿಸಿದೆ.

ಹವ್ವಾ ಫೌಝಾನ್‌ಎಂಬವರಿಗೆ ಸೇರಿದ 15 ಕುರಿಗಳನ್ನು ಸಿದ್ದೀಖ್ ಸ್ಟ್ರೀಟ್‌ನಲ್ಲಿ ಕಟ್ಟಿಹಾಕಲಾಗಿತ್ತು. ಈ ಸಂದರ್ಭ ಹತ್ತಾರು ಬೀದಿನಾಯಿಗಳು ಏಕಾಏಕಿ ಕುರಿಗಳ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ. ಘಟನೆಯ ಪರಿಣಾಮ 13 ಕುರಿಗಳು ಸಾವನ್ನಪ್ಪಿವೆ. ಎರಡು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ ಎಂದು ಕುರಿಗಳ ಮಾಲಕ ಫೌಝಾನ್ ತಿಳಿಸಿದ್ದಾರೆ.

ಘಟನೆಯಿಂದ ಲಕ್ಷಕ್ಕೂ ಅಧಿಕ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News