ನಾಳೆ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು
Update: 2016-09-11 18:16 IST
ಹೊಸದಿಲ್ಲಿ, ಸೆ.11: ತಮಿಳುನಾಡಿಗೆ 1.50 ಲಕ್ಷ ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಸೆ.5 ರಂದು ನೀಡಿದ್ದ ಆದೇಶವನ್ನು ಮರು ಪರಿಶೀಲಿಸಬೇಕೆಂದು ಕರ್ನಾಟಕ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ರವಿವಾರ ಒಪ್ಪಿಗೆ ಸೂಚಿಸಿದೆ.
ಸೆ.12 ರಂದು ಬೆಳಗ್ಗೆ ಸುಪ್ರೀಂಕೋರ್ಟ್‌ನ ನ್ಯಾ. ದೀಪಕ್ ಮಿಶ್ರಾ ಹಾಗೂ ನ್ಯಾ. ಯು.ಯು. ಲಿಲಿತ್ ಅವರ ವಿಭಾಗೀಯ ಪೀಠ ಕರ್ನಾಟಕದ ಅರ್ಜಿ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್‌ನ ಆದೇಶದಂತೆ ತಮಿಳುನಾಡಿಗೆ ಈಗಾಗಲೇ 60 ಸಾವಿರ ಕ್ಯೂಸೆಕ್ಸ್ ನೀಡು ಹರಿಸಿದ್ದೇವೆ. ಇನ್ನು ಬಿಡುಗಡೆ ಮಾಡಲು ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಹಾಗಾಗಿ ಆದೇಶಕ್ಕೆ ಮಾರ್ಪಾಡು ತರಬೇಕೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಕರ್ನಾಟಕ ವಿನಂತಿಸಿಕೊಂಡಿದೆ.