×
Ad

ಇತಿಹಾಸ ನಿರ್ಮಿಸಿದ ತಫೀಝ್‌ಅಹ್ಮದ್

Update: 2016-09-11 23:22 IST

ಬೆಂಗಳೂರು, ಸೆ.11: ಮಿಕ್ಸೆಡ್ ಮಾರ್ಷಲ್ ಆರ್ಟ್ಸ್‌ನ ಆಲ್ ಆಫ್ರಿಕಾ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಮುಹಮ್ಮದ್ ತಫೀಝ್‌ಅಹ್ಮದ್ ಕಂಚಿನ ಪದಕವನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಅಂತಾರಾಷ್ಟ್ರೀಯ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಫೆಡರೇಷನ್‌ವತಿಯಿಂದ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಆ.29ರಿಂದ ಸೆ.5ರವರೆಗೆ ಆಯೋಜಿಸಿದ್ದ ಆಲ್ ಆಫ್ರಿಕಾ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾದ ಶಾನ್‌ಟೇಲರ್ ವಿರುದ್ಧ ಗೆಲುವು ಸಾಧಿಸಿ ಮೂರನೆ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ಕಂಚಿನ ಪದಕ ಜಯಿಸಿದ್ದಾರೆ.
ಈ ಚಾಂಪಿಯನ್‌ಶಿಪ್‌ನಲ್ಲಿ ಸ್ವೀಡನ್, ದಕ್ಷಿಣ ಆಫ್ರಿಕಾ, ಜರ್ಮನಿ, ಫಿನ್‌ಲ್ಯಾಂಡ್ ಹಾಗೂ ಭಾರತದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಂಚಿನ ಪದಕವನ್ನು ಜಯಿಸಿರುವ ಮುಹಮ್ಮದ್ ತಫೀಝ್‌ಅಹ್ಮದ್, ನ.21ರಿಂದ 28ರವರೆಗೆ ನಡೆಯಲಿರುವ ಯುರೋಪಿಯನ್ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
ಯುರೋಪಿಯನ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಮುಹಮ್ಮದ್ ತಫೀಝ್‌ಅಹ್ಮದ್‌ರಿಗೆ 2.50ಲಕ್ಷ ರೂ.ಗಳ ಅಗತ್ಯವಿದ್ದು, ಆಸಕ್ತರು ನೆರವಿನ ಹಸ್ತ ಚಾಚಬಹುದು. ಹೆಚ್ಚಿನ ಮಾಹಿತಿಗಾಗಿ ಮುಹಮ್ಮದ್ ತಫೀಝ್‌ಅಹ್ಮದ್ ಅವರ ಮೊಬೈಲ್ ಸಂಖ್ಯೆ:7411206932ನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News