ಕನ್ನಡಿಗರ ಆಕ್ರೋಶ: ರಾಜ್ಯದ ವಿವಿಧೆಡೆ ತಮಿಳುನಾಡಿನ ವಾಹನಗಳಿಗೆ ಬೆಂಕಿ
Update: 2016-09-12 12:56 IST
ಬೆಂಗಳೂರು, ಸೆ.12: ತಮಿಳುನಾಡಿನಲ್ಲಿ ಕನ್ನಡಿಗರ ಆಸ್ತಿ-ಪಾಸ್ತಿ ಮೇಲೆ ದಾಳಿ ಹಾಗೂ ಕನ್ನಡಿಗನ ಮೇಲಿನ ಹಲ್ಲೆ ಪ್ರಕರಣದಿಂದ ರೊಚ್ಚಿಗೆದ್ದಿರುವ ಕನ್ನಡಿಗರು ರಾಜ್ಯದ ಕೆಲವೆಡೆ ತಮಿಳುನಾಡು ನೋಂದಣಿಯ ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ತಮಿಳುನಾಡು ನೋಂದಣಿಯ ಲಾರಿಗೆ ಬೆಂಕಿ ಹಚ್ಚಲಾಗಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೈಸೂರಿನ ಚಾಮುಂಡಿಪುರದ ಎಲೆತೋಟ ಪ್ರದೇಶದಲ್ಲಿ ನಿಂತಿದ್ದ ತಮಿಳುನಾಡು ನೋಂದಣಿಯ ಕ್ವಾಲಿಸ್ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕಾರು ಸಂಪೂರ್ಣ ವಾಗಿ ಸುಟ್ಟು ಹೋಗಿದೆ.