×
Ad

ಶಾಂತಿ ಕಾಪಾಡಿ: ವೆಂಕಯ್ಯ ನಾಯ್ಡು ಕರೆ

Update: 2016-09-13 11:10 IST

ಹೊಸದಿಲ್ಲಿ, ಸೆ.13:  ಕಾವೇರಿ ನದಿ ನೀರು ಹಂಚಿಕೆಯ  ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಇಂದು ಪತ್ರಿಕಾಗೋಷ್ಠಿಯಲ್ಲಿ ಶಾಂತಿ ಕಾಪಾಡುವಂತೆ  ಕರ್ನಾಟಕ ಮತ್ತು ತಮಿಳುನಾಡು  ರಾಜ್ಯಗಳ ಜನತೆಗೆ ಮನವಿ ಮಾಡಿದ್ದಾರೆ.
ಅವರ  ಸುದ್ದಿಗೋಷ್ಠಿಯ ಹೈಲೈಟ್ಸ್‌ 
*ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಹಿಂಸೆಯಿಂದ ಯಾವುದೇ  ಪ್ರಯೋಜನವಿಲ್ಲ.
*ಯಾವುದೇ ಬಗೆಯ ವಿವಾದವನ್ನು ರಸ್ತೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ.
*ಬೇರೆ  ರಾಜ್ಯಗಳ ಜನರಿಗೆ ರಕ್ಷಣೆ ನೀಡಬೇಕು 
*ಹಿಂಸಾಚಾರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
*ಹಿಂಸೆಯನ್ನು ವೈಭವಿಕರಿಸದಂತೆ ಟಿವಿ ಮಾಧ್ಯಮಗಳಿಗೆ ಕರೆ.
*ಕಾವೇರಿ ವಿಚಾರದಲ್ಲಿ  ಕೋರ್ಟ್‌ ಆದೇಶವನ್ನು ಎಲ್ಲರೂ ಪಾಲಿಸಬೇಕು.
*ಯಾರೂ ಹಿಂಸೆಯನ್ನು ಪ್ರಚೋದಿಸುವ ಕೆಲಸ ಮಾಡಬಾರದು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News