×
Ad

ಕಾವೇರಿ ಕಿಚ್ಚಿಗೆ ಮತ್ತೊಂದು ಬಲಿ; ಗಾಯಾಳು ಕುಮಾರ್ ಸಾವು

Update: 2016-09-13 14:05 IST

ಬೆಂಗಳೂರು ,ಸೆ.13: ನಗರದಲ್ಲಿ  ಗಲಭೆಯ  ವೇಳೆ ಪೊಲೀಸರ ಲಾಠಿ ಚಾರ್ಜ್ ನಿಂದ ತಪ್ಪಿಸಿಕೊಳ್ಳಲು ಕಟ್ಟ ಡದಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದ  ಸ್ಥಳೀಯ ನಿವಾಸಿ ಕುಮಾರ‍್ ಎಂಬವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಮಾರ್ ಮೂಲತ: ಕುಣಿಗಲ್ ನಿವಾಸಿ

ಅವರು ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾಗ ತಪ್ಪಿಸಿಕೊಳ್ಳಲು ಪಕ್ಕದ ಕಟ್ಟಡಕ್ಕೆ ಓಡಿದ್ದರು. ಮೂರನೆ ಮಹಡಿ ಹತ್ತಿದ ಅವರು ಮುಂದೆ ದಾರಿ ಕಾಣದೆ ಕೆಳಕ್ಕೆ ಜಿಗಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಲಕ್ಷ್ಮಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ್   ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪ್ಲಾಸ್ಟಿಕ್ ಕುರ್ಚಿ ಸಾಗಿಸುತ್ತಿದ್ದ ಕ್ಯಾಂಟರ್ ಗೆ ಬೆಂಕಿ: ತಿಗಳರಪಾಳ್ಯದ ಬಳಿ  ತಮಿಳುನಾಡಿನ ಕ್ಯಾಂಟರ್ ಗೆ ಬೆಂಕಿ ಹಚ್ಚಲಾಗಿದೆ. 

ಪ್ಲಾಸ್ಟಿಕ್ ಕುರ್ಚಿ ಸಾಗಿಸುತ್ತಿದ್ದ ಕ್ಯಾಂಟರ್ ಗೆ ಬೆಂಕಿಯಿಂದ ಸುಟ್ಟು ಕರಕಲಾಗಿದೆ. 

ಟಿಂಬರ್ ಯಾರ್ಡ್ ಲೇಔಟ್ ಬಳಿ ಕಳೆದ ರಾತ್ರಿ ಅರ್ಧ ಸುಟ್ಟಿದ್ದ ಎಸ್ ಆರ್ ಎಸ್ ಬಸ್ ಗೆ ದುಷ್ಕರ್ಮಿಗಳು ಇಂದು ಮತ್ತೆ ಬೆಂಕಿ ಹಚ್ಚಲಾಗಿದೆ.

312 ಮಂದಿ ಸೆರೆ: ಕಾವೇರಿ ಗಲಾಟೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ 312 ಮಂದಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಮೂಲದ ಬ್ಯಾಂಕ್‌ಗಳ ನಾಮಫಲಕಕ್ಕೆ ಬೆಂಕಿ
ಬೆಂಗಳೂರಿನಲ್ಲಿ  ಕಾರ್ಯಾಚರಿಸುತ್ತಿರುವ ತಮಿಳುನಾಡು ಮೂಲದ ಬ್ಯಾಂಕ್‌ಗಳ ನಾಮಫಲಕಕ್ಕೆ  ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News