×
Ad

ನೀರು ಹರಿಸುವುದರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನ : ಸಿಎಂ ಸಿದ್ದರಾಮಯ್ಯ

Update: 2016-09-13 15:15 IST

ಬೆಂಗಳೂರು ,ಸೆ.13:ಕಾವೇರಿ ಜಲ ವಿವಾದದ ಹಿನ್ನೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬಂದಿರುವ ಹಿಂಸಾಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ  ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯು ನೀರು  ಹರಿಸುವುದರಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಕಾನೂನು ಸುವ್ಯವವಸ್ಥೆ ಕಾಪಾಡಲು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.ಕಾವೇರಿ ಹಂಚಿಕೆಯಲ್ಲಿ ನಮಗೆ  ಅನ್ಯಾಯವಾಗುತ್ತಿದೆ. ಹಿಂದಿನಿಂದಲೂ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸೆ.14ರಂದು ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ವಿವರಿಸಲಾಗುವುದು. ರಾಷ್ಟ್ರೀಯ ಜಲನೀತಿ ತರಲು ಅವರಲ್ಲಿ ಹಿಂದೆ ಒತ್ತಾಯ ಮಾಡಿದ್ದೆ. ಇದೀಗ ಮತ್ತೆ ಅವರಿಗೆ ಮನವಿ ಮಾಡಲಾಗುವುದು.ಎಂದು ಸಿದ್ದರಾಮಯ್ಯ ಹೇಳಿದರು.

.ಸೆ.5ರಂದು ಸುಪ್ರೀಂಕೋರ್ಟ್‌ ಅತ್ಯಂತ ಕ್ಲಿಷ್ಟದ ಆದೇಶ ನೀಡಿತ್ತು. ಸೋಮವಾರ (ಸೆ.12) ಸುಪ್ರೀಂ ಕೋರ್ಟ್ ನೀಡಿದ ಮರು ಆದೇಶ ಪಾಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ..  ಆದರೂ ಸಾಂವಿಧಾನಿಕ ವ್ಯವಸ್ಥೆಯಂತೆ ಆದೇಶ ಪಾಲಿಸಬೇಕಾಗಿದೆ  ಎಂದು ಸಿದ್ದರಾಮಯ್ಯ ಹೇಳಿದರು. 

ತಮಿಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಯಾರೂ ಸಾರ್ವಜನಿಕ ಹಾಸ್ತಿಪಾಸ್ತಿಗೆ ಹಾನಿ ಮಾಡಬಾರದು. ಯಾವುದೇ ಸಮಸ್ಯೆಗೂ ಹಿಂಸಾಚಾರ ಪರಿಹಾರವಲ್ಲ  .ಶಾಂತಿ ಮತ್ತು ಸಂಯಮದಿಂದ ಪರಿಹಾರ ಕಾಣಬೇಕಿದೆ. ಕನ್ನಡಿಗರಿಗೆ ರಕ್ಷಣೆ ನೀಡುವಂತೆ ತಮಿಳುನಾಡು ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಮದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News