16 ಠಾಣಾ ವ್ಯಾಪ್ತಿಯಲ್ಲಿ ಹೇರಲಾಗಿದ್ದ ಕರ್ಪ್ಯೂ ಹಿಂತೆಗೆತ
Update: 2016-09-14 12:14 IST
ಬೆಂಗಳೂರು, ಸೆ.14: ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನ ಹದಿನಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ಕರ್ಪ್ಯೂವನ್ನು ಹಿಂಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೆಘರಿಕ್ ತಿಳಿಸಿದ್ದಾರೆ.
ಕರ್ಪ್ಯೂವನ್ನು ಹಿಂಪಡೆಯಲಾಗಿದ್ದರೂ, ನಿಷೇಧಾಜ್ಞೆ ಮುಂದುವರಿದಿದೆ.ಬೆಂಗಳೂರು ನಗರಾದ್ಯಂತ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದೆ