ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಾಟದಿಂದ ಪೊಲೀಸ್ ಗೆ ಗಾಯ
Update: 2016-09-14 12:55 IST
ಬೆಂಗಳೂರು, ಸೆ.14:ರೈಫಲ್ ಸ್ವಚ್ಚಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಾಟದ ಪರಿಣಾಮವಾಗಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡ ಘಟನೆ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಪೊಲೀಸ್ ಪೇದೆ ರಮೇಶ್(40) ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಠಾಣೆಯಲ್ಲಿ ರೈಫಲ್ ಸ್ವಚ್ಚಗೊಳಿಸುವಾಗ ಈ ಘಟನೆ ನಡೆದಿದೆ. ಗುಂಡು ರಮೇಶ್ ಅವರ ಎದೆಯ ಪಕ್ಕದ ಭಾಗಕ್ಕೆ ಗುಂಡು ತಗುಲಿ ನಂತರ ಠಾಣೆಯ ಮೇಲ್ಚಾವಣಿಗೆ ಬಡಿದಿದೆ ಎಮದು ಪೊಲೀಸರು ತಿಳಿಸಿದ್ದಾರೆ