ಶ್ವಾನದ ಮೇಲಿನ ಪ್ರೀತಿ : ಮದುವೆ ತಿರಸ್ಕರಿಸಿದ ಯುವತಿ..!
ಹೊಸದಿಲ್ಲಿ, ಸೆ.14: ಯುವತಿಯೊಬ್ಬಳು ತನ್ನ ನಾಯಿಯ ಮೇಲಿರುವ ಪ್ರೀತಿಗಾಗಿ ಮದುವೆಗೆ ಆಸಕ್ತಿ ವಹಿಸಿದ್ದ ಯುವಕನನ್ನು ತಿರಸ್ಕರಿಸಿದ ಘಟನೆ ದಿಲ್ಲಿಯಲ್ಲಿ ಬೆಳಕಿಗೆ ಬಂದಿದೆ.
ಕರಿಶ್ಮಾ ವಾಲಿಯಾಗೆ ತನ್ನ ಸಾಕು ನಾಯಿ ಲೂಸಿ ಮೇಲೆ ಎಲ್ಲಿಲ್ಲದ ಮಮತೆ. ಕರಿಶ್ಮಾ ನಾಯಿಯ ಬಗ್ಗೆ ಅತಿಯಾದ ಕಾಳಜಿ ವಹಿಸಿದ ಕಾರಣಕ್ಕಾಗಿ ಆಕೆಯನ್ನು ಮದುವೆಯಾಗಲು ಮುಂದೆ ಬಂದಿರುವ ಯುವಕನು ಆಕ್ಷೇಪ ವ್ಯಕ್ತಪಡಿಸಿದನು. ಇದು ಆಕೆಗೆ ಸರಿ ಕಾಣಲಿಲ್ಲ.
ಗುರ್ಗಾಂವ್‌ನಲ್ಲಿ ಕೆಲಸದಲ್ಲಿರುವ ಕರಿಶ್ಮಾ ತನ್ನ ಭಾವಿ ಗಂಡನಲ್ಲಿ ಮದುವೆಯಾದ ಬಳಿಕ ಒಟ್ಟಿಗೆ ನಾಯಿಯನ್ನು ಕರೆದೊಯ್ಯುವ ವ್ಯಕ್ತಪಡಿಸಿದಳು. ಇದು ಅವನಿಗೆ ಸರಿ ಕಾಣಲಿಲ್ಲ.
" ನನ್ನ ಬದುಕಿನಲ್ಲಿ ನಾಯಿ ಪ್ರವೇಶಿಸುವುದನ್ನು ಇಚ್ಛಿಸುವುದಿಲ್ಲ. ನನ್ನ ಬೆಡ್‌ನಲ್ಲೂ ನಾಯಿಗೆ ಸ್ಥಾನ ನೀಡಲಾರೆ. ನನ್ನ ತಾಯಿಗೂ ನಾಯಿಯ ಬಗ್ಗೆ ಆಸಕ್ತಿ ಇಲ್ಲ” ಎಂದು ಯುವಕ ಆಕೆಗೆ ತನ್ನ ಅಭಿಪ್ರಾಯ ತಿಳಿಸಿದ ಎನ್ನಲಾಗಿದೆ.ಇದು ಯುವತಿಗೆ ಸರಿ ಕಾಣಲಿಲ್ಲ. ಅತನೊಂದಿಗೆ ಮದುವೆ ನಿರಾಕರಿಸಿದಳು. ಇದರೊಂದಿಗೆ ಅರೇಂಜ್ಡ್ ಮದುವೆ ಮುರಿದು ಬಿತ್ತು ಎಂದು ತಿಳಿದು ಬಂದಿದೆ.