ಎತ್ತುಗಳ ಹತ್ಯೆ ವದಂತಿ : ನಕಲಿ ಗೋರಕ್ಷಕರಿಂದ ಮಹಿಳೆ ಸಹಿತ ಮನೆ ಮಂದಿ ಮೇಲೆ ಹಲ್ಲೆ
Update: 2016-09-14 23:15 IST
ಬೆಂಗಳೂರು, ಸೆ. 14: ಫಾರ್ಮ್ ಹೌಸ್‌ವೊಂದರಲ್ಲಿ ಎರಡು ಎತ್ತುಗಳನ್ನು ಬಕ್ರೀದ್ ಹಿನ್ನೆಲೆಯಲ್ಲಿ ಕುರ್ಬಾನಿ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿ, ಕೆಲ ಗೋರಕ್ಷಕರು ಫಾರ್ಮ್ ಹೌಸ್‌ನ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಮಹಿಳೆ, ಮಕ್ಕಳು ಎನ್ನದೆ ಹಲ್ಲೆ ನಡೆಸಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆನಂತರ ಅಲ್ಲಿಗೆ ಆಗಮಿಸಿರುವ ಪೊಲೀಸರು ಫಾರ್ಮ್‌ಹೌಸ್ ಮಾಲಕ ಉಮೇಝ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನಕಲಿ ಗೋರಕ್ಷಕರ ಮೇಲೆ ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. 300ಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ. ಆನಂತರ ಪೊಲೀಸರಿಗೆ ಕರೆ ಮಾಡಿ ಅವರ ಎದುರಿನಲ್ಲೂ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.