ಕೆ.ಜಿ. ರಸ್ತೆಯಲ್ಲಿ ವಾಟಾಳ್ ಸೇರಿದಂತೆ ನೂರಾರು ಮಂದಿ ವಶಕ್ಕೆ
Update: 2016-09-15 12:22 IST
ಬೆಂಗಳೂರು, ಸೆ. 15: ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಲ್ ನಾಗರಾಜ ಸೇರಿದಂತೆ ನೂರಾರು ಮಂದಿಯನ್ನು ಪೊಲೀಸರು ಇಂದು ವಶಕ್ಕೆ ತೆಗೆದುಕೊಂಡಿದ್ದಾರೆ.
ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ವಾಟಾಳ್ ನಾಗರಾಜ್ ಅವರನ್ನು ಕೆ.ಜಿ.ರಸ್ತೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಇಂದು ರಾಜ್ಯಾದ್ಯಂತ ರೈಲ್ ಬಂದ್ ಕರೆ ನೀಡಿದ್ದರು.