ಮುಂಬೈನ ಬಹು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ
Update: 2016-09-15 14:31 IST
ಮುಂಬೈ, ಸೆ.15: ಇಲ್ಲಿನ ಸ್ವಾಮಿ ವಿವೇಕಾನಂದ ರಸ್ತೆ ಪಕ್ಕದಲ್ಲಿರುವ ಬಹುಅಂತಸ್ತಿನ ಕಟ್ಟಡ ಹಿರಾನಂದಿನಿ ಹೆರಿಟೇಜ್ ಬಿಲ್ಡಿಂಗ್‌ನಲ್ಲಿ ಇಂದು ಮಧ್ಯಾಹ್ನ ಬೆಂಕಿ ಅನಾಹುತ ಕಾಣಿಸಿಕೊಂಡಿದೆ. ಸಾವು ,ನೋವು ಆಸ್ತಿಪಾಸ್ತಿಯ ನಷ್ಟದ ಬಗ್ಗೆ ವಿವರ ಲಭ್ಯವಾಗಿಲ್ಲ.
ಕಾಂಡಿವಾಲಿ ವೆಸ್ಟ್‌ನಲ್ಲಿರುವ ಪೊಯ್ಸಾರ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಮೂವತ್ತು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು, ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಮತ್ತು ಮೂರು ನೀರು ಟ್ಯಾಂಕರ್‌ಗಳ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. 22ನೆ ಅಂತಸ್ತಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ.