×
Ad

ಕೊಲೆ ಮಾಡಲಾಗಿದೆಯೆಂದು ಪೋಷಕರ ಆರೋಪ

Update: 2016-09-16 22:17 IST

ಶಿವಮೊಗ್ಗ, ಸೆ. 16: ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 9ನೆ ತರಗತಿ ಓದುತ್ತಿದ್ದ ಬಿ.ಎಚ್.ಕಾವ್ಯಾ(15) ಎಂಬ ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತನ್ನ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಮೃತ ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ನಿಗೂಢ ಸಾವು:  

 ಸೆ.15 ರಂದು ಮುಂಜಾನೆ 6 ರಿಂದ 6:30ರ ಸರಿಸುಮಾರಿಗೆ ಬಾಲಕಿ ಬಿ.ಎಚ್.ಕಾವ್ಯಾ ಹಾಸ್ಟೆಲ್ ಹಿಂಭಾಗ ದಲ್ಲಿರುವ ಬಟ್ಟೆ ತೊಳೆಯುವ ಸ್ಥಳದಲ್ಲಿ ಜಾರಿಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದಳು. ತಕ್ಷಣವೇ ಆಕೆಯನ್ನು ಹಾಸ್ಟೆಲ್‌ನ ಪ್ರಾಂಶುಪಾಲರ ಕಾರಿನಲ್ಲಿ ಶಿಕಾರಿಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಬಾಲಕಿಯ ಪರಿಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಬಾಲಕಿಯನ್ನು ಆ್ಯಂಬುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಕರೆತರುವ ಮಾರ್ಗಮಧ್ಯೆ ಅಸುನೀಗಿದ್ದಳು ಎಂದು ಹಾಸ್ಟೆಲ್ ಸಿಬ್ಬಂದಿ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅನುಮಾನ: ಬಾಲಕಿ ಬಿದ್ದಿದ್ದ ಸ್ಥಳಕ್ಕೆ ನಾವು ಕೂಡ ತೆರಳಿ ಪರಿಶೀಲನೆ ನಡೆಸಿದೆವು. ಅದು ಸಮತಟ್ಟಾದ ಪ್ರದೇಶವಾಗಿದೆ. ಜಾರಿ ಬಿದ್ದರೂ ದೊಡ್ಡ ಪ್ರಮಾಣ

ದಲ್ಲಿ ತಲೆಗೆ ಗಾಯವಾಗುವುದಿಲ್ಲ. ಆದರೆ ಕಾವ್ಯಾಳ ತಲೆಯ ಹಿಂಭಾಗದಲ್ಲಿ ಎರಡು ಗಾಯಗಳಾಗಿವೆ. ಕಿವಿಯಲ್ಲಿಯೂ ರಕ್ತಸ್ರಾವವಾಗಿದೆ. ಇದೆಲ್ಲ ಗಮನಿಸಿದರೆ ಆಕೆಯ ಹತ್ಯೆ ನಡೆಸಿರುವ ಅನುಮಾನ ವ್ಯಕ್ತವಾಗುತ್ತಿದೆ. ಪೊಲೀಸರು ಕೂಡಲೇ ತನಿಖೆ ನಡೆಸಿ, ಕೊಲೆಗಡುಕರ ವಿರುದ್ಧ್ದ ಕಠಿಣ ಕ್ರಮ ಜರಗಿಸಬೇಕು ಎಂದು ಮೃತ ಬಾಲಕಿಯ ತಾಯಿ ಕಸ್ತೂರಮ್ಮರವರು ಆಗ್ರಹಿಸಿದ್ದಾರೆ. ಈ ನಡುವೆ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ವಸತಿ ಶಾಲೆಯ ಪ್ರಾಂಶುಪಾಲ, ವಾರ್ಡನ್ ಹಾಗೂ ಇತರೆ ಸಿಬ್ಬಂದಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇ ನ್‌ಸ್ಪೆಕ್ಟರ್ ಹರೀಶ್ ಕೆ. ಪಾಟೀಲ್ ನೇತೃತ್ವದ ಪೊಲೀಸ್ ತಂಡ ಈ ಪ್ರಕರಣದ ತನಿಖೆಯನ್ನು ನಡೆಸು ತ್ತಿದ್ದು, ಈಗಾಗಲೇ ಹಾಸ್ಟೆಲ್ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅನುಮಾನದ ಮೇರೆಗೆ ಹಲರನ್ನು ವಿಚಾರಣೆಗೆ ಒಳಪಡಿಸಿದೆ. ಇಷ್ಟರಲ್ಲಿಯೇ ಬಾಲಕಿಯ ಸಾವಿನ ಸುತ್ತ ಆವರಿಸಿರುವ ನಿಗೂಢತೆ ಭೆೇದಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News