ಕಾರವಾರ: ಅಕ್ರಮ ಗೋವಾ ಮದ್ಯ ವಶ
Update: 2016-09-17 22:26 IST
ಕಾರವಾರ, ಸೆ.17: ತಪಾಸಣೆ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಸುಮಾರು 20 ಸಾವಿರ ರೂ. ಮೌಲ್ಯದ ವಾರಸುದಾರರಿಲ್ಲದ ಗೋವಾದ ಅಕ್ರಮ ಮದ್ಯದ ತುಂಬಿದ ಬಾಟಲಿಗಳನ್ನು ಶನಿವಾರ ವಶಕ್ಕೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಕುರ್ಲಾ-ಮಂಗಳೂರು ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಕಾರವಾರದಲ್ಲಿ ನಿಲುಗಡೆಯಾಗಿದ್ದ ಸಂದರ್ಭದಲ್ಲಿ ಅಧಿಕಾರಿಗಳು ತಪಾಸಣಾ ಕಾರ್ಯ ನಡೆಸುತ್ತಿದ್ದರು. ರೈಲಿನಲ್ಲಿ ಅನಾಥವಾಗಿ ಇಡಲಾಗಿದ್ದ ಚೀಲವನ್ನು ರೈಲ್ವೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಗೋವಾದ ಅಕ್ರಮ ಮದ್ಯ ಪತ್ತೆಯಾಗಿದೆ. ಚೀಲದಲ್ಲಿ ವಿವಿಧ ಕಂಪೆನಿಗಳಿಗೆ ಸೇರಿದ್ದ 596 ಬಾಟಲಿಗಳಲ್ಲಿ ಸುಮಾರು 85 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಈ ಅಕ್ರಮ ಮದ್ಯಗಳನ್ನು ಅಬಕಾರಿ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ಕೊಂಕಣ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ. ವರ್ಮಾ ತಿಳಿಸಿದ್ದಾರೆ.