ನಾಳೆ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣೆ
ಕಾರವಾರ, ಸೆ.17: ಪ್ರಸಕ್ತ ಸಾಲಿನ ಸಮನ್ವಯ ಶಿಕ್ಷಣ ಚಟುವಟಿಕೆ ಅಡಿಯಲ್ಲಿ 6ರಿಂದ 16 ವಯೋಮಾನದ ವಿಕಲಚೇತನ ಮಕ್ಕಳಿಗೆ ತಾಲೂಕು ಹಂತದಲ್ಲಿ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸೆ.19ರಂದು ಕಾರವಾರದ ಗುರುಭವನ, ಸೆ.20: ಅಂಕೋಲಾದ ನಿರ್ಮಲಾ ಶಾಲೆ, ಸೆ. 21 ರಂದು ಕುಮಟಾದ ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕೇರಿ, ಸೆ.22ರಂದು ಹೊನ್ನಾವರದ ಮೂಡಗಣಪತಿ ದೇವಸ್ಥಾನ, ಸೆ.23ರಂದು ಭಟ್ಕಳದ ಸಮಾಹಿಪ್ರಾಮ ಶಾಲೆ ಶಿರಾಲಿ, ಸೆ.24ರಂದು ಸಿದ್ದಾಪುರದ ಸಹಿಪ್ರಾ ಶಾಲೆ, ಸೆ.26ರಂದು ಶಿರಸಿಯ ಎಮ್‌ಎಚ್‌ಪಿಎಸ್ ಮಾರಿಗುಡಿ, ಸೆ. 27ರಂದು ಮುಂಡಗೋಡದ ಕ್ಷೇತ್ರ ಸಂಪನೂಲ ಕೇಂದ್ರ, ಸೆ. 28 ರಂದು ಯಲ್ಲಾಪುರದ ಮಾದರಿ ಶಾಲೆ ಬಸ್ ನಿಲ್ದಾಣ ಎದುರು, ಸೆ.29ರಂದು ಜೋಯಿಡಾದ ಕುಣಬಿ ಸಮಾಜ ಭವನ, ಸೆ. 2ರಂದು ಹಳಿಯಾಳದ ಶಾಲೆ ನಂ.3ರಲ್ಲಿ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅಂಗವಿಕಲ ಪ್ರಮಾಣ ಪತ್ರ ನೀಡಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.