×
Ad

ಕಾರವಾರದಲ್ಲಿ ಪಾಸ್‌ಪೋರ್ಟ್ ಮೇಳಕ್ಕೆ ಚಾಲನೆ

Update: 2016-09-17 22:38 IST

ಕಾರವಾರ, ಸೆ.17: ನಗರದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಪಾಸ್‌ಪೋರ್ಟ್ ಮೇಳಕ್ಕೆ ಶಾಸಕ ಸತೀಶ್ ಸೈಲ್ ಶನಿವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿರುವ ಪಾಸ್‌ಪೋರ್ಟ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಿಬಿರವನ್ನು ಸ್ಥಳೀಯವಾಗಿ ಆಯೋಜಿಸುವ ಮೂಲಕ ಜಿಲ್ಲೆಯ ಜನತೆ ಇಲ್ಲಿಯೇ ಪಾಸ್‌ಪೋರ್ಟ್ ಪಡೆಯಲು ಅವಕಾಶವಿದೆ. ಪ್ರತಿ ವರ್ಷ ಇಂತಹ ಮೇಳಗಳನ್ನು ಜಿಲ್ಲೆಯಲ್ಲಿ ನಡೆಸುವ ಮೂಲಕ ಜಿಲ್ಲೆಯ ಜನತೆಗೆ ಸುಲಭವಾಗಿ ಪಾಸ್‌ಪೋರ್ಟ್ ಪಡೆಯುವ ಅವಕಾಶ ಕಲ್ಪಿಸಬೇಕಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು.

  ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಸಹಾಯಕ ಪಾಸ್‌ಪೋರ್ಟ್ ಅಧಿಕಾರಿ ವನಜಾ ವೆಂಕಟರಮಣ, ಆಕಾಂಕ್ಷಿಗಳಿಗೆ ಮಾಹಿತಿ ನೀಡಿ, ಆಧಾರ್ ಕಾರ್ಡ್, ಹುಟ್ಟಿದ ದಿನಾಂಕ ದೃಢೀಕರಿಸುವ ದಾಖಲೆ, ಫೋಟೊ ಇತ್ಯಾದಿ ಅಗತ್ಯ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಿದ ನಂತರ ಪೊಲೀಸ್ ವೆರಿಫಿಕೇಶನ್ ಮಾಡಿ ಪಾಸ್‌ಪೋರ್ಟ್ ವಿತರಿಸಲಾಗುತ್ತದೆ ಎಂದರು. ಪಾಸ್‌ಪೋರ್ಟ್ ಶಿಬಿರದ

ಲ್ಲಿ ಪಾಸ್‌ಪೋರ್ಟ್ ಪಡೆಯಲು ನೂರಾರು ಮಂದಿ ತಮ್ಮ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಸರತಿ ಸಾಲಿನಲ್ಲಿ ನಿಂತು, ತಮ್ಮ ಹೆಸರುಗಳನ್ನು ನೋಂದಾಯಿಸಿದರು. ರವಿವಾರ ಸಹ ಪಾಸ್‌ಪೋರ್ಟ್ ಮೇಳ ನಡೆಯಲಿದ್ದು, ಈಗಾಗಲೇ ಪಾಸ್‌ಪೋರ್ಟ್ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿ, ನಿಗದಿತ ಶುಲ್ಕವನ್ನು ಭರಿಸಿ, ರಸೀದಿಯನ್ನು ಪಡೆದುಕೊಂಡ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News