ಅಲೀಮ್ ಶೇಖ್

Update: 2016-09-17 17:11 GMT

ಕಾರವಾರ, ಸೆ.17: ಕೆಎಸ್ಸಾರ್ಟಿಸಿ ಬಸ್ ಚಾಲಕ ಅಲೀಮ್ ಶೇಖ್(51) ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.

ನಗರದ ಸುಂಕೇರಿಯ ನಿವಾಸಿಯಾಗಿದ್ದ ಅವರು ಹಿಂದೆ ಮಣಿಪಾಲ್ ಬಸ್ಸಿನ ಚಾಲಕರಾಗಿದ್ದಾಗ ತಮ್ಮ ಬಿಡುವಿನ ಅವಧಿಯಲ್ಲಿ ತಮ್ಮ ಸುತ್ತಮುತ್ತಲಿನ ಹಾಗೂ ಪರಿಚಯದವರಿಗೆ ಮಣಿಪಾಲ್ ಆಸ್ಪತ್ರೆಯಿಂದ ಔಷಧಗಳನ್ನು ಯಾವುದೇ ಆಕಾಂಕ್ಷೆ ಇಲ್ಲದೆ ತಂದುಕೊಟ್ಟು ಅಳಿಲು ಸೇವೆಯಲ್ಲಿ ತೊಡಗಿಕೊಂಡಿದ್ದರು. ಸದ್ಯ ಮಲ್ಲಾಪುರ ಮಾರ್ಗದಲ್ಲಿ ತಮ್ಮ ಚಾಲಕ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಮೃತರು ತಾಯಿ, ಹೆಂಡತಿ, ಇಬ್ಬರು ಮಕ್ಕಳು ಸೇರಿದಂತೆ ಅನೇಕ ಸಂಬಂಧಿಗಳನ್ನು ಅಗಲಿದ್ದಾರೆ.

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ಕೆ. ತುಶಾರ್ ಅವರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News