×
Ad

ಸಮಾಜದ ಸೇವೆಗೆ ಸೇವಕರು ಮುಂದಾಗಬೇಕು: ರೂಬೆನ್ ಮೋಸಸ್

Update: 2016-09-18 22:12 IST

ಚಿಕ್ಕಮಗಳೂರು, ಸೆ.18: ಯಾವುದೇ ಧರ್ಮವಾದರೂ ತಮ್ಮ ಸಮಾಜ ಬಾಂಧವರ ಸೇವೆ ಮಾಡಲು ಮುಂದಾಗಬೇಕು ಎಂದು ನಗರಸಭಾ ಸದಸ್ಯ ರೂಬೆನ್ ಮೋಸಸ್ ಪಾಸ್ಟರ್ಸ್‌ಗಳಿಗೆ ಕಿವಿ ಮಾತು ಹೇಳಿದರು.

ಅವರು ನಗರದ ಶಂಕರಪುರದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾ ಸೇವಕರ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಂಘಟನೆ ಎನ್ನುವುದು ಕೇವಲ ಪ್ರಚಾರಕ್ಕಲ್ಲ, ಕಷ್ಟಜೀವಿಗಳ, ನೊಂದವರ ಪರ ಕೆಲಸ ಮಾಡುವುದಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಸಂಘಟನೆಯ ನಿರ್ದೇಶಕ ರೆವರೆಂಡ್ ಸುರೇಶ್ ಜಾಕೋಬ್ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಕ್ರೈಸ್ತ ಪಾಸ್ಟರ್ಸ್‌ಗಳನ್ನು ಒಗ್ಗೂಡಿಸಿ ಒಕ್ಕೂ ಟದ ಮೂಲಕ ಸಮಾಜ ಸೇವೆ ಮಾಡಲಾಗುವುದು ಎಂದರು.ವೇದಿಕೆಯಲ್ಲಿ ರೆವರೆಂಡ್ ವಿ.ಪಿ. ರಂಗ, ರೆವರೆಂಡ್ ಮೋಹನ್ ಕುಮಾರ್, ಒಕ್ಕೂಟದ ಅಧ್ಯಕ್ಷ ಜಿ.ಎಸ್. ಕೃಷ್ಣ, ಕಾರ್ಯದರ್ಶಿ ಎಸ್.ಕುಮಾರ್, ಉಪಾಧ್ಯಕ್ಷ ಮಹಿಮದಾಸ್, ಪುನೀತ್, ಪಿಲಿಪ್ ಹಾಸನ ಸೇವಕರ ಒಕ್ಕೂಟದ ಜೈರಾ್ ಜಾಕೊೀಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News