ಹಳೆ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಕೊಡುಗೆ
ಚಿಕ್ಕಮಗಳೂರು, ಸೆ.18: ನಗರದ ಸಂತ ಜೋಸೆಫ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 1986-87ನೆ ಸಾಲಿನ ಹಳೆ ವಿದ್ಯಾರ್ಥಿಗಳು ಶಾಲೆಗೆ ಸುಮಾರು 2ಲಕ್ಷ ರೂ. ವೌಲ್ಯದ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದರು.
ಹಳೆಯ ವಿದ್ಯಾರ್ಥಿ ಚಾರ್ಲ್ಸ್ ಬ್ಯಾಪ್‌ಟಿನ್ ಮಾತನಾಡಿ, 1986-87ನೆ ಸಾಲಿನಲ್ಲಿ ಓದಿದವರು ವಿದೇಶಗಳಲ್ಲಿದ್ದು ಒಗ್ಗೂಡಲು ಬಹಳ ಸಮಯ ತೆಗೆದುಕೊಂಡಿತು. ನಾವು ಓುವಾಗ ಶಾಲೆಯಲ್ಲಿ ಇಂತಹ ಶೈಕ್ಷಣಿಕ ಸೌಲಭ್ಯಗಳಿರಲಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸುವ ಸಲುವಾಗಿ ಗಣಕ ಯಂತ್ರ ನೀಡಲಾಗುತ್ತಿದೆ. ಎಸೆಸೆಲ್ಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳು ವವರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಫೆರ್ನಾಂಡಿಸ್ ಮಾತನಾಡಿ, ಶಿಸ್ತು-ಸಂಯಮ ಬೆಳೆಸಿಕೊಂಡಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲ್ಲಾದರೂ ಜೀವನ ಸಾಗಿಸಬಹುದು. ಹಿಂದಿನ ದಿನಗಳಿಂದಲೂ ಶಾಲೆಗೆ ಒಳ್ಳೆಯ ಹೆಸರು ಇದೆ. ವಿದ್ಯಾರ್ಥಿಗಳು ಒಂದೇ ಕುಟುಂಬದ ಸದಸ್ಯರಂತೆ ಓದುತ್ತಿದ್ದಾರೆ. ಕಲಿತ ಶಾಲೆ ಹಾಗೂ ಗುರು ಹಿರಿಯರಿಗೆ ಗೌರವ ಕೊಡಬೇಕು. ಹಳೆ ವಿದ್ಯಾರ್ಥಿಗಳು ಶಾಲೆ ಮೇಲಿನ ಪ್ರೀತಿಯಿಂದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳಾದ ದೀಪಕ್, ಸಂದೀಪ್, ಡಾ.ಜಾನೇಂದ್ರ, ಮೆಲ್ವಿನ್, ಸಿ.ಆರ್.ವೆಂಕಟೇಶ್, ಶಿವಕುಮಾರ್ ಮತ್ತಿತರರಿದ್ದರು. ವಿದ್ಯಾರ್ಥಿ ವಿನ್ಸೆಂಟ್ ಲೋಬೋ ಸ್ವಾಗತಿಸಿದರು. ಪ್ರಣೀತ್ ನಿರೂಪಿಸಿದರು. ಸಮೀಕ್ಷಾ ವಂದಿಸಿದರು