ಬಯಲು ಶೌಚಮುಕ್ತ ಗ್ರಾಮವನ್ನಾಗಿಸಲು ಆರತಿ ಕಲ್ಲೇಶ್ ಕರೆ

Update: 2016-09-20 16:54 GMT

ಚಿಕ್ಕಮಗಳೂರು, ಸೆ.20: ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಲು ಬ್ಯಾರವಳ್ಳಿ ಪಂಚಾಯತ್ ಅಧ್ಯಕ್ಷೆ ಆರತಿ ಕಲ್ಲೇಶ್ ಗ್ರಾಮಸ್ಥರಿಗೆ ಕರೆ ನೀಡಿದರು.

ಅವರು ಹೊರಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಣಪತಿ ವಿಸರ್ಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗ್ರಾಮವನ್ನು ಸ್ವಚ್ಛ, ನೈರ್ಮಲ್ಯದಿಂದ ಕಾಪಾಡಿ ಆರೋಗ್ಯವಂತ ಪರಿಸರ ರೂಪಿಸಿಕೊಳ್ಳುವುದರೊಂದಿಗೆಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಿ ಪಂಚಾಯತ್‌ನ ಇತರ ಗ್ರಾಮಗಳಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.

ಗ್ರಾಮದ ಪ್ರತಿಯೊಬ್ಬ ಸದಸ್ಯರು ಗ್ರಾಮದ ಸುತ್ತಮುತ್ತಲ ಪರಿಸರವನ್ನು ಸ್ವಚ್ಛ ಮಾಡುವುದರ ಮುಖಾಂತರ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಸಮಾಜದಲ್ಲಿ ಉತ್ತಮ ನಾಗರಿಕ ವ್ಯಕ್ತಿಯನ್ನಾಗಿ ಮಾಡಲು ನೆರವಾಗಬೇಕು.

ಜೊತೆಗೆ ವ್ಯಸನಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಎನ್.ಎಂ. ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಡಿ. ಮಂಜುನಾಥ್‌ಗೌಡ, ಎಂ.ಪಿ. ಶೇಖರ್, ಗ್ರಾಮಸ್ಥರಾದ ಎಚ್.ಜಿ. ಈರಯ್ಯ, ದಿನೇಶ್,ಮಹೇಶ್, ಮಮತಾ, ಪುಟ್ಟಸ್ವಾಮಿ, ಉಮೇಶ್ ಮತ್ತಿತರರಿದ್ದರು. ವಿನೋದ್‌ಕುಮಾರ್‌ನಿರೂಪಿಸಿ, ಮಂಜುನಾಥ್.ಎಚ್.ಸಿ. ಸ್ವಾಗತಿಸಿ, ನೇತ್ರಾಪ್ರಾರ್ಥಿಸಿ, ವೀಣಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News