‘ತಮಿಳುನಾಡಿಗೆ ಒಂದು ಹನಿ ನೀರು ಬಿಡಬೇಡಿ’
Update: 2016-09-21 13:32 IST
ಬೆಂಗಳೂರು, ಸೆ.21: ತಮಿಳುನಾಡಿಗೆ ಇನ್ನು ಮುಂದೆ ಒಂದು ಹನಿ ಕಾವೇರಿ ನೀರು ಬಿಡಬೇಡಿ. ತಮಿಳುನಾಡಿನ ಸಾಂಬಾ ಬೆಳೆಗಿಂತಲೂ ನಮಗೆ ಕುಡಿಯುವ ನೀರು ಅತ್ಯಂತ ಮುಖ್ಯ. ನೀವು ದಿಟ್ಟ ನಿರ್ಧಾರ ಕೈಗೊಳ್ಳಿ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಮಾಜಿ ಪ್ರಧಾನಮಂತ್ರಿ ಎಚ್‌ಡಿ ದೇವೇಗೌಡರು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಅಭಯ ನೀಡಿದ್ದಾರೆ.
ಬುಧವಾರ ಸುಮಾರು 20 ನಿಮಿಷಗಳ ಕಾಲ ದೂರವಾಣಿಯ ಮೂಲಕ ಸಿದ್ದರಾಮಯ್ಯರೊಂದಿಗೆ ಮಾತುಕತೆ ನಡೆಸಿದ ಗೌಡರು ಈ ವಿಷಯ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ನೀಡಿರುವ ಆದೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಿರಸ್ಕರಿಸಬೇಕು ಎಂದು ದೇವೇಗೌಡರು ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.