×
Ad

‘ಅಮ್ಮ’ನ ಆಶೀರ್ವಾದಕ್ಕಾಗಿ ಕನ್ನಡಿಗರಿಗೆ ಕೈಕೊಟ್ಟರೆ ಪ್ರಧಾನಿ ಮೋದಿ?

Update: 2016-09-22 12:50 IST
ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್

ಬೆಂಗಳೂರು, ಸೆ.22: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ತಮಗೆ ಭರ್ಜರಿ ಬೆಂಬಲ ನೀಡಿರುವ ಕನ್ನಡಿಗರ ಬಗ್ಗೆ ಪ್ರಧಾನಿ ಮೋದಿ ಈಗ ತಳೆದಿರುವ ’ನಿರಾಸಕ್ತಿ’ಯ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯ ಸಭೆಯಲ್ಲಿ ಎಐಎಡಿಎಂಕೆ ಬೆಂಬಲ ಗಳಿಸಲು ಪ್ರಧಾನಿ ತಮ್ಮ ಮೌನದ ಮೂಲಕ ಜಯಲಲಿತಾ ಅವರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ರಾಜ್ಯದ ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಪ್ರಧಾನಿಯ ಮಧ್ಯ ಪ್ರವೇಶ ಮಾಡಿಸುವಲ್ಲಿ ವಿಫಲರಾಗಿರುವುದು, ನೀರು ಬಿಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ತದ್ವಿರುದ್ಧ ಹೇಳಿಕೆ ನೀಡಿರುವುದು ಹಾಗೂ ಮಹತ್ವದ ಸರ್ವ ಪಕ್ಷಗಳ ಸಭೆಯನ್ನು ಬಿಜೆಪಿ ಬಹಿಷ್ಕರಿಸಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ತಮ್ಮ ಮೇಲೆ ಅಪಾರ ಭರವಸೆ ಇಟ್ಟ ಕನ್ನಡಿಗರಿಗೆ ಇಂತಹ ಮಹತ್ವದ ವಿಷಯದಲ್ಲೇ ಕೈಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ, ಆರೋಪ, ಆಕ್ರೋಶ ವ್ಯಕ್ತವಾಗಿದೆ. #ModiMosa ಎಂಬ ಹ್ಯಾಶ್‌ಟ್ಯಾಗ್ ಗುರುವಾರ ಟ್ರೆಂಡಿಂಗ್ ಆಗಿದೆ.


 ತಮಿಳುನಾಡಿಗೆ ಸೆ.27ರವರೆಗೆ ದಿನನಿತ್ಯ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸಿತ್ತು. ಅಲ್ಲದೇ ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸುವ ಕುರಿತಂತೆ ಪ್ರಧಾನಿ ನರೇಂದ್ರ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕರ್ನಾಟಕದ ಕೇಂದ್ರ ಸಚಿವರು ಕೂಡಾ ಕಾವೇರಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ತಮಿಳುನಾಡಿಗೆ ನೀರು ಕೊಡಬೇಕು ಎನ್ನುತ್ತಿದ್ದರೆ, ರಾಜ್ಯ ಬಿಜೆಪಿ ಕೊಡಬಾರದು ಎಂದು ಹೇಳುತ್ತಿದೆ. ಈ ರೀತಿಯಾದ ದ್ವಂದ್ವ ಹಾಗೂ ಅಸಹಾಯಕ ನಿಲುವುಗಳ ಕಾರಣಕ್ಕೆ ಬಿಜೆಪಿ ವಿರುದ್ಧ ಜನರು ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಟ್ವಿಟ್ಟರ್ ನಲ್ಲಿ ಕಂಡುಬಂದ ಪ್ರತಿಕ್ರಿಯೆಗಳು 

ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೂಸ್ಟರ್

ಇನ್ನಷ್ಟು ಟ್ವೀಟ್ ಗಳಿಗಾಗಿ ಕ್ಲಿಕ್ ಮಾಡಿ  http://bit.ly/2cSP1GP

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News