×
Ad

ಸಿಎಫ್ಐನಿಂದ ಉನ್ನತ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಕೆ

Update: 2016-09-22 16:08 IST

ಮಂಗಳೂರು, ಸೆ.21: ದ.ಕ.ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಕೋಮುವಾದ ಹೆಚ್ಚಳ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರಹರಣ ಮುಂತಾದ ಶೈಕ್ಷಣಿಕ ಮತ್ತು ಸಾಮಾಜಿಕಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ನಿಯೋಗವು ಉನ್ನತ ಶಿಕ್ಷಣ ಸಚಿವ ಬಸವರಾಜು ರಾಯರೆಡ್ಡಿಯವರಿಗೆ ವರದಿ ಸಲ್ಲಿಸಿದೆ.

ಇತ್ತಿಚೆಗೆ ವಿವಾದವೆಬ್ಬಿಸಿದ ಶ್ರೀನಿವಾಸ್ ಕಾಲೇಜು ಪ್ರಕರಣ, ನಕಲಿ ರ್ಯಾಗಿಂಗ್ ಕೇಸ್, ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್, ಮಂಗಳೂರು ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮರಾವಿಟ್ಟ ಆರೋಪಿ ಸಂತೋಷ್ ಆಚಾರ್ಯನ ವಿರುದ್ಧ ದಾಖಲಿಸಿದ ದುರ್ಬಲ ಪ್ರಕರಣಗಳು ಮತ್ತು ಆತನಿಗೆ ಶೀಘ್ರ ಬಿಡುಗಡೆ, ಸುರತ್ಕಲ್ ಕಾಲೇಜಿನ ಅಧ್ಯಾಪಕನಿಂದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ, ಪೆರುವಾಜೆ ಕಾಲೇಜಿನಲ್ಲಿ ನಡೆದ ಕೇಸರಿ ಶಾಲು ಪ್ರಕರಣ ಮುಂತಾದ ಪ್ರಕರಣಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ ರಾಜ್ಯಾಧ್ಯಕ್ಷ ಮುಹಮ್ಮದ್ ತುಫೈಲ್, ಕಾರ್ಯದರ್ಶಿ ತಪ್ಸೀರ್, ಜಿಲ್ಲಾಧ್ಯಕ್ಷ ಅತಾವುಲ್ಲ, ಫಯಾಝ್ ಮಂಜನಾಡಿ, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News