×
Ad

ವಿಧಾನಸಭೆಯಲ್ಲಿ ಸದನ ಸಲಹಾ ಸಮಿತಿ ಸಭೆ; 2 ಗಂಟೆ ಕಾಲ ಕಾವೇರಿ ವಿವಾದ ಚರ್ಚೆಗೆ ನಿರ್ಧಾರ

Update: 2016-09-23 11:21 IST

ಬೆಂಗಳೂರು, ಸೆ.23: ಇಂದು ವಿಧಾನಸಭೆಯಲ್ಲಿ ನಡೆದ ಸದನಾ ಸಲಹಾ ಸಮಿತಿ ಸಭೆಯಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕಲಾಪದಲ್ಲಿ ಎರಡು ಗಂಟೆಗಳ ಕಾಲ ಮಾತ್ರ ಚರ್ಚೆಗೆ ಅವಕಾಶ  ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಕಲಾಪದಲ್ಲಿ ಕಾನೂನು ಲೋಪವಾಗದ ರೀತಿಯಲ್ಲಿ ಎಚ್ಚರವಹಿಸಲು  ಮತ್ತು ವಾಸ್ತವ ಸ್ಥಿತಿಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವ ಬಗ್ಗೆ  ತೀರ್ಮಾನಿಸಲಾಗಿದೆ. ರಾಜ್ಯ ಸರಕಾರ ಒಂದು ಸಾಲಿನ ನಿರ್ಣಯ ಮಂಡಿಸಲಿದೆ. ಈ ನಿರ್ಣಯವನ್ನು ಬೆಂಬಲಿಸಿ ಕಲಾಪದಲ್ಲಿ ಚರ್ಚೆ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News