ಕೆಪಿಎಲ್ ಕ್ರಿಕೆಟ್ ಮೇಲೆ ಬೆಟ್ಟಿಂಗ್ ಧಂದೆಯ ಕರಿ ನೆರಳು: ನಾಲ್ವರ ಬಂಧನ

Update: 2016-09-23 06:23 GMT

ಹುಬ್ಬಳ್ಳಿ, ಸೆ.23: ಹುಬ್ಬಳ್ಳಿಯ ರಾಜನಗರ ಕೆ.ಎಸ್.ಸಿ.ಎ. ಮೈದಾನದಲ್ಲಿ ಕೆ.ಪಿ.ಎಲ್.ಟಿ-20 ಪಂದ್ಯಾವಳಿ ನಡೆಯುತ್ತಿದ್ದು, ಈಗ ಇದರ ಮೇಲೆ ಬೆಟ್ಟಿಂಗ್ ಧಂದೆಯ ಕರಿ ನೆರಳು ಬಿದ್ದಿದೆ.

ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಕೈಗೊಂಡ ಹುಬ್ಬಳ್ಳಿಯ ಅಶೋಕ ನಗರ ಪೊಲೀಸರು  ಹರಿಯಾಣ ಮೂಲದ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹರಿಯಾಣ ಮೂಲದ ಫತೇಹಬಾದ್ ಜಿಲ್ಲೆಯ ಟೋಹನಾದ ವಿಕಾಸ ವಮ೯, ಸಂಜಯ್ ಕುಮಾರ್ ಆರೋರಾ, ಪಂಕಜ್ ಕುಮಾರ್ ಆರೋರಾ, ದಿವಾಕರ್ ಮೋದಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 24 ಸಾವಿರ ನಗದು, 4 ಮೊಬೈಲ್ ಜಫ್ತಿ ಮಾಡಿಕೊಂಡಿದ್ದು, ಇವರು ಗ್ಯಾಲರಿಯಲ್ಲೇ ಕುಳಿತೇ ಮೊಬೈಲ್ ಮೂಲಕ ಬೆಟ್ಟಿಂಗ್ ಧಂದೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ತಂಗಿದ್ದ ಹೋಟೆಲ್ ನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಶೋಕ ನಗರ ಸಕ೯ಲ್ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News