×
Ad

ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಮಧ್ಯೆ ಹೊಡೆದಾಟ

Update: 2016-09-23 12:15 IST

ಹುಬ್ಬಳ್ಳಿ, ಸೆ.23: ಕ್ಷುಲ್ಲಕ ಕಾರಣಗಳಿಗಾಗಿ ಎರಡು ಕೋಮಿನ ಮಧ್ಯೆ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಗಂಭೀರ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ.

 ಹೊಡೆದಾಟದಲ್ಲಿ ಎರಡೂ ಕೋಮಿನವರು ಸೇರಿದಂತೆ 11 ಜನರಿಗೆ ಗಾಯಗೊಂಡಿದ್ದಾರೆ, 

ಗಾಯಗೊಂಡವರನ್ನು ಸಂತೋಷ (೨೪), ಪಕ್ಕಿರಪ್ಪ (೪೫), ಶಂಕ್ರಪ್ಪ (೫೫), ನಾಗಪ್ಪ (೫೨), ಬಸ್ಸಪ್ಪ (೪೦), ಹೊನ್ನವ್ವ (೪೨), ನೀಲಪ್ಪ (೪೦) ಹಾಗೂ  ಮೌಲಾಲಿ (೪೨), ಅನ್ವರ್ ಸಾಬ್ (೫೫), ಅಲ್ಲಾವುದ್ದೀನ್ (೪೮), ಬೋರೆಗಾರ (೪೦) ಎಂದು ಗುರುತಿಸಲಗಿದೆ. ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ..

ಶಿಗ್ಗಾಂವ್ ತಾಲೂಕಿನ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News