ಭೋಜನ ವಿರಾಮಕ್ಕೆ ವಿಧಾನಸಭೆ ಕಲಾಪ ಮುಂದೂಡಿಕೆ
ಬೆಂಗಳೂರು, ಸೆ.23: ಕಾವೇರಿ ವಿವಾದಕ್ಕೆ ಸಂಬಂಧಿಸಿ ಇಂದು ಕರೆಯಲಾದ ವಿಧಾನಸಭೆಯ ವಿಶೇಷ ಐತಿಹಾಸಿಕ ಅಧಿವೇಶನದಲ್ಲಿ ಜನರ , ರೈತರ ಹಿತವನ್ನು ಕಾಪಾಡುವುದು ನಮ್ಮ ಧರ್ಮ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾವನೆ ಮಂಡಿಸಿದರು.
ಇಂಗ್ಲಿಷ್‌ನಲ್ಲಿ ಶೆಟ್ಟರ‍್ ಮಂಡಿಸಿದ ನಿರ್ಣಯವನ್ನುಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ ಅನುಮೋದಿಸಿ ಮಾತನಾಡಿದರು.
ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದರು. ಎಚ್ ಡಿ ಕುಮಾರಸ್ವಾಮಿ, ಕೆಎಸ್ ಪುಟ್ಟಣ್ಣಯ್ಯ ಮಾತನಾಡಿದರು.
ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಪ್ರದೇಶದ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಅವರು ಆಕ್ರೋಶಗೊಂಡಿದ್ದಾರೆ. ನ್ಯಾಯಾಲಯದ ಆದೇಶ ಕಾರ‍್ಯರೂಪ ಅಸಾಧ್ಯ. ಅನಿವಾರ್ಯ ಪರಿಸ್ಥಿತಿಯಲ್ಲಿ ನಿರ್ಣಯ ಕೈಗೊಳ್ಳಬೇಕಾಗಿದೆ. ನಮ್ಮ ರಾಜ್ಯದ ಜನರಿಗೆ ಒಂದು ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ತಮಿಳುನಾಡು ಎರಡನೆ ಬೆಳೆಗಾಗಿ ನೀರು ಕೇಳುತ್ತಿದೆ. ತಮಿಳುನಾಡು ರೈತರಿಗೆ ತೊಂದರೆಕೊಟ್ಟು ನಾವು ನೀರು ಪಡೆಯುತ್ತಿಲ್ಲ. ಎಮದು ಜೆಡಿಎಲ್ಪಿ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬಳಿಕ ಕಲಾಪವನ್ನು ಭೋಜನ ವಿರಾಮಕ್ಕಾಗಿ 3:30ಕ್ಕೆ ಮುಂದೂಡಲಾಯಿತು.
ಮೇಲುಕೋಟೆ ಕ್ಷೇತ್ರದ ಶಾಸಕ ಹಾಗೂ ಸರ್ವೋದಯ ಪಕ್ದದ ಮುಖಂಡ ಕೆಎಸ್ ಪುಟ್ಟಣ್ಣ ನೀರು ಬೀಡುವುದಿಲ್ಲವೆಂದು ಕರ್ನಾಟಕದ ಜನತೆಗೆ ಭರವಸೆ ನೀಡಿ. ಸಿದ್ದರಾಮಯ್ಯರೇ ಧೈರ್ಯವಾಗಿರಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಮಾಜಿ ಸಚಿವರಾದ ಅಂಬರೀಶ್ ಮತ್ತು ವಿ.ಶ್ರೀನಿವಾಸ ಪ್ರಸಾದ್ ಗೈರು ಹಾಜರಾಗಿದ್ದರು.