×
Ad

ಮೂಡಿಗೆರೆ: ‘ವಿಶ್ವ ತುಳು ಆಯೋನೊ’ ರಥಯಾತ್ರೆ ಆಗಮನ

Update: 2016-09-23 22:11 IST

ಮೂಡಿಗೆರೆ, ಸೆ.23: ಕಾಸರಗೋಡಿನ 108 ದೈವಗಳ ಸಂಗಮ ಸ್ವರೂಪದ ವಿಶ್ವ ತುಳು ಆಯೋನೊ ಪ್ರಚಾರ ರಥಯಾತ್ರೆಯು ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿದ್ದು, ಇಲ್ಲಿನ ತುಳು ಕೂಟದ ಸದಸ್ಯರು ರಥವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಪ್ರಚಾರ ರಥವು ಬೇಲೂರು ಕಡೆ ತೆರಳಿತು. ಈ ಸಂದರ್ಭದಲ್ಲಿ ತುಳು ಕೂಟದ ಅಧ್ಯಕ್ಷೆ ಐವಿಆರ್ ಪಿಂಟೋ, ಕಾರ್ಯದರ್ಶಿ ಯೋಗೀಶ್ ಪೂಜಾರಿ, ರಮೇಶ್ ಆಚಾರ್ಯ, ರವಿ ಕುಮಾರ್, ನರೇಂದ್ರ ಶೆಟ್ಟಿ, ಅಶೋಕ್ ಎನ್. ಶೆಟ್ಟಿ, ವಸಂತ ಪೂಜಾರಿ, ಪ್ರವೀಣ್ ಪೂಜಾರಿ, ಕೇಶವ ಸುವರ್ಣ, ಅತುಲ್ ರಾವ್, ವಿಶು ಕುಮಾರ್, ಸುಂದರ್ ಕುಮಾರ್, ನಾಗೇಶ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News